ಬ್ರಿಟನ್ನಿನ ಸೇಂಟ್ ಹೆಲೆನಾ ದ್ವೀಪದಲ್ಲಿರುವ ಜೋನಾಥನ್‌ ಆಮೆಯು 190ನೇ ಜನ್ಮ ದಿನ ಆಚರಿಸಿದ್ದು, ಅತಿ ದೀರ್ಘಾಯುಷ್ಯದ ಭೂಮಿ ಮೇಲಿನ ಜೀವಂತ ಪ್ರಾಣಿ ಎಂಬ ದಾಖಲೆಗೆ ಸೇರಿತು. 

1882ರಲ್ಲಿ ಇಲ್ಲಿಗೆ ಬಂದಾಗ ಈ ಆಮೆಗೆ 50 ವರುಷ ಆಗಿತ್ತು. ಅದು ಹುಟ್ಟಿದ್ದು 1832ರಲ್ಲಿ. ಬಹುತೇಕ ಗವರ್ನರ್ ಮನೆಯಲ್ಲಿ ಕಳೆದ ಈ ಆಮೆಯ ಚಟುವಟಿಕೆ ಈಗ ಸ್ವಲ್ಪ ಕುಂದಿದೆ.

ಟೋಂಗಾ ರಾಜ ಮನೆತನಕ್ಕೆ ಸೇರಿದ ತುಯಿ ಮಲಿಲಾ ಎಂಬ ಆಮೆಗೆ 1965ರಲ್ಲಿ ಸಾಯುವಾಗ 188 ವರುಷ ಪ್ರಾಯವಾಗಿತ್ತು.