ಮಂಗಳೂರು, ಫೆ. 26: ರಾಜ್ಯದ ಎಲ್ಲ ಹೆದ್ದಾರಿಗಳನ್ನು ಫೋರ್ ವೇ ಮಾಡುತ್ತಿದ್ದು ಎಲ್ಲ ಹೆದ್ದಾರಿಗಳ ಕಾಮಗಾರಿ ಪ್ರಗತಿಯಲ್ಲಿದೆ, ಕೆಲವು ಮುಗಿದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಾಡದು ಕೊರ್ಡೆಲ್ ಹಾಲ್‌ನಲ್ಲಿ ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಮುಂದಾಳ್ತನದಲ್ಲಿ ಎಲ್ಲ ವಿಚಾರ ಚರ್ಚೆ ಆಗಲಿದೆ. ಈ ಸುತ್ತಿನಲ್ಲಿ 485 ಕಿಮೀ ಹೆದ್ದಾರಿ ನಾಲ್ಕಗಲ ಆಗುತ್ತಲಿದೆ. ಏಳು ಸೇತುವೆಗಳು ಆಗುತ್ತಿದ್ದು, ನಾಲ್ಕು ಮುಗಿದಿವೆ. ಹೆದ್ದಾರಿ ಕೇಂದ್ರ ಸಚಿವರು ಅದನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಸಂಬಂಧ 1,890 ಕೋಟಿ ರೂಪಾಯಿಗೂ ಹೆಚ್ಚು ಕೇಂದ್ರದಿಂದ ಹರಿದು ಬಂದಿದೆ ಎಂದೂ ಅವರು ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಸಹ ಈ ಬಗೆಗೆ ಮಾತನಾಡಿದರು. ಹೆಚ್ಚುವರಿ ಟೋಲ್ ಗೇಟ್ ತೆಗೆಸುವ ಬಗೆಗೆ ಮಾತುಕತೆ ನಡೆದಿದೆ. ಸರಿಪಡಿಸಲು ಪ್ರಯತ್ನ ನಡೆದಿದೆ ಎಂದು ಸುರತ್ಕಲ್ ಟೋಲ್ ಗೇಟ್ ಬಗೆದು ಚರ್ಚೆಯಲ್ಲಿ ವಿವರ ನೀಡಲಾಯಿತು.