ಮೂಡುಬಿದಿರೆ : ಪುತ್ತಿಗೆ ಹಾಗೂ ಪಾಲಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೇಮಾರು ಪಲ್ಲದಮೇಲು ಸಮೀಪದ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವು ಹಗಲು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಜುಗಾರಿ ದಂಧೆ, ಮಧ್ಯಪಾನ, ಡ್ರಗ್ಸ್ ಸೇವಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವ ಉತ್ಸಾಹಿ ಬಳಗ ವತಿಯಿಂದ ಮೂಡುಬಿದಿರೆ ಪೋಲಿಸ್ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕೇಮಾರು ಭಾಗದ ಶಾಲಾ-ಕಾಲೇಜುಗಳ ವಿಧ್ಯಾರ್ಥಿಗಳು ಕೊಡ್ಯಡ್ಕದವರೆಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಇದೇ ರಸ್ತೆಯಲ್ಲೆ ಭಯಭೀತರಾಗಿ ನಡೆದಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಅರಣ್ಯ ಇಲಾಖೆ ಸಂಭಂಧಪಟ್ಟ ಎಕರೆಗಟ್ಟಲೆ ಜಾಗವಿದ್ದು ಈ ಜಾಗದಲ್ಲಿ ಮಧ್ಯಪಾನ ಮಾಡಿದ ಬಾಟಲ್ ಹಾಗೂ ವಸತಿಗೃಹಗಳ ಕಸದ ರಾಶಿಯಿಂದ ಪ್ರಕೃತಿ ಸೌಂದರ್ಯ ಹದಗೆಟ್ಟಿದೆ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಪುತ್ತಿಗೆ ಪಂಚಾಯತ್ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಸಂದರ್ಭದಲ್ಲಿ ಇಂತಹ ಸನ್ನಿವೇಶದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತರುವಂತೆ ಸಂದೇಶ್ ಅವರು ತಿಳಿಸಿದರು.
ಇತ್ತೀಚೆಗೆ ಯುವ ಉತ್ಸಾಹಿ ಬಳಗದ ಸದಸ್ಯರು, ಊರ ಗ್ರಾಮಸ್ಥರು ಹಾಗೂ ಪಾಲಡ್ಕ ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ್ ಹಾಗೂ ಅರಣ್ಯ ಅಧಿಕಾರಿ ಚಂದ್ರಶೇಖರ್ ರವರ ಸಹಕಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.