ದಕ್ಷಿಣ ಕನ್ನಡ ಜಿಲ್ಲೆಯ 17, ಉಡುಪಿ ಜಿಲ್ಲೆಯ 5 ಸೇರಿ ರಾಜ್ಯದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಒಟ್ಟು 145 ಜನರು 625 ಅಂಕ ಪಡೆದು ಟಾಪರ್ ಎನಿಸಿದ್ದಾರೆ ಎಂದು ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಚಿವ ಬಿ. ಸಿ. ನಾಗೇಶ್ ವಿವರ ನೀಡಿದರು.

ಮಲ್ಪೆಯಲ್ಲಿ ಮೀನು ಹೊರುವ ಕೊಪ್ಪಳ ಮೂಲದ ಹೆತ್ತವರ ಹುಡುಗ ಪುನೀತ್ ನಾಯ್ಕ್ ಆ ಕೆಲಸವನ್ನೂ ಮಾಡುತ್ತ ಟಾಪರ್ ಕೂಡ ಆಗಿದ್ದಾನೆ.

ಪರೀಕ್ಷೆ ಕಟ್ಟಿದ 4,12,334 ಹುಡುಗಿಯರಲ್ಲಿ 3,72,279 ಬಾಲಕಿಯರು ಎಂದರೆ 90.29% ಪಾಸಾಗಿದ್ದಾರೆ.

4,41,199 ಹುಡುಗರಲ್ಲಿ 3,58,602 ಎಂದರೆ 81.31% ಬಾಲಕರು ಪಾಸಾಗಿದ್ದಾರೆ.

ಒಟ್ಟು 8,53,346 ವಿದ್ಯಾರ್ಥಿಗಳಲ್ಲಿ 7,30,881 ವಿದ್ಯಾರ್ಥಿಗಳು ಎಂದರೆ 85.63% ತೇರ್ಗಡೆ ಹೊಂದಿದರು.

ಗ್ರಾಮೀಣರಲ್ಲಿ 91.32% ಪಾಸಾದರೆ ನಗರ ವಾಸಿಗಳಲ್ಲಿ 86.64% ಪಾಸಾಗಿದ್ದಾರೆ.