ರಾಜ್ಯದ ಅದರಲ್ಲೂ ವಾಯವ್ಯ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಜನಜೀವನ ಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿಗಳು ತುಂಬಿ ಹರಿಯುವುದರ ಜೊತೆಗೆ ಸಾಕಷ್ಟು ಊರು ನೀರು ನೆರೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ‌ಕುಂಬಾರವಾಡ ಸರಕಾರಿ ಶಾಲೆ ಹಾಗೂ ಧಾರವಾಡ ಜಿಲ್ಲೆಯ ಮುರಕಟ್ಟಿ ಊರಿನ ಸರಕಾರಿ ಶಾಲಾ ಕಟ್ಟಡಗಳು ಉರುಳಿವೆ.

ಬೆಳಗಾವಿ ಜಿಲ್ಲೆಯ ಕೆಲವೆಡೆ ಪ್ರವಾಹದ ಹಾವಳಿ ಜನರನ್ನು ಊರು ಬಿಡುವಂತೆ ಮಾಡಿದೆ.

ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಕಕ್ಕರಗೊಳ್ಳಿ ಸಂಪರ್ಕ ಸೇತುವೆಯನ್ನು ನದಿ ನುಂಗಿದೆ.

ಮೈಸೂರು ಜಿಲ್ಲೆಯ ಬೆಟ್ಟದಪುರದಲ್ಲಿ ಮನೆ ಅಡಿಮೇಲಾಗಿದೆ.

ಶಿರಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.