ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಾಳಿದಾಸ ಮಾಸದ ಅಂಗವಾಗಿ ಆಮ್ನಾಯ ಯಕ್ಷಸ್ಕೃತಿ ಬಳಗ ಗಾಳಿಮನೆ ಅವರಿಂದ ಜುಲೈ 20ರಂದು ಮಧ್ಯಾಹ್ನ ಗಂಟೆ 2:00 ಮೂಡುಬಿದಿರೆ ಸಮೀಪದ ಸಂಪಿಗೆಯ ದುರ್ಗಾ ಜ್ಯೋತಿಷ್ಯಾಲಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕವಿ ಶೇಣಿ ಗೋಪಾಲಕೃಷ್ಣ ಭಟ್ಟರು ಅಖ್ಯಾನಿಸಿದ ಕವಿರತ್ನ ಕಾಳಿದಾಸ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತರುವಾಯ ಸಂಜೆ ಗಂಟೆ ನಾಲ್ಕರಿಂದ ಡಾ. ಎಂ ಪ್ರಭಾಕರ ಜೋಶಿ ಅವರು ಸುಬ್ರಹ್ಮಣ್ಯ ಧಾರೇಶ್ವರರ ಅನು ಸ್ಮೃತಿಯನ್ನು ನಡೆಸಿಕೊಡಲಿದ್ದಾರೆ. ಡಾ. ವಿನಾಯಕ ಭಟ್ಟ ಗಾಳಿ ಮನೆಯವರು ಶ್ರೀಧರ ಕುಂಬಳೆ ಅವರಿಗೆ ನುಡಿ ನಮನವನ್ನು ಅರ್ಪಿಸಲಿದ್ದಾರೆ ಎಂದು ಆಮ್ನಾಯ ಯಕ್ಷಸ್ಕೃತಿ ಬಳಗ ಗಾಳಿ ಮನೆ ಅವರು ತಿಳಿಸಿದ್ದಾರೆ.
