ಮೂಡುಬಿದಿರೆ: ಸ್ಥಳೀಯ ಗೋಪಾಲಕೃಷ್ಣ ದೇವಾಲಯದ 108ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಷ್ಟೋತ್ತರ ಸಂಭ್ರಮದ ಸಲುವಾಗಿ ಮೂಡುಬಿದಿರೆ ಜವನೆರ್ ಬೆದ್ರ ಫೌಂಡೇಶನ್ ರವರು ಕೃಷೋತ್ಸವ 2024ನ್ನು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮ ಆಗಸ್ಟ್ 27ರಂದು ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆಯಲಿದೆ. ಸಂಜೆ ಗಂಟೆ 3:00 ರಿಂದ ನಡೆಯುವ ಭಕ್ತಿ ಭಾವ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಗಾನ ಭೂಷಣ ಆರ್ಯಭಟ ಪ್ರಶಸ್ತಿ ವಿಜೇತ ಕೆ. ವೆಂಕಟ ಕೃಷ್ಣ ಭಟ್ ಮತ್ತು ಬಳಗದ ಶ್ರೀ ರಾಗಂ ಆರ್ಕೆಸ್ಟ್ರಾ ತಂಡದವರು ನಡೆಸಿಕೊಡಲಿದ್ದಾರೆ. ಗಂಟೆ 5:30ಕ್ಕೆ ಗೋಪಾಲಕೃಷ್ಣ ದೇವಳದ ಜೀರ್ಣೋದ್ಧಾರದ ಗುರುತರ ಸೇವೆ ಗುರುತಿಸಿ ಉದ್ಯಮಿ ಶಿವಾನಂದ ಪ್ರಭು ರವರಿಗೆ ಸನ್ಮಾನ ಕಾರ್ಯಕ್ರಮ. ತರುವಾಯ ಗಂಟೆ 6:30 ರಿಂದ ದಿನೇಶ್ ಕೋಡಪದವುರವರ ಸಾರಥ್ಯದಲ್ಲಿ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಜವನೆರ್ ಬೆದ್ರ ಫೌಂಡೇಶನ್ ಅಧ್ಯಕ್ಷ ಅಮರನಾಥ ಕೋಟೆ ತಿಳಿಸಿರುತ್ತಾರೆ.
