ಮೂಡುಬಿದರೆ: ಸ್ಥಳೀಯ ಅಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜುಲೈ 30 ರಿಂದ ಆಗಸ್ಟ್ ಐದರ ತನಕ ಪ್ರತಿದಿನ ಸಂಜೆ ಗಂ.5:45 ರಿಂದ ಗಂಟೆ 7:15 ರವರೆಗೆ ಮಹಾಭಾರತ ಪ್ರವಚನ ಸಪ್ತಾಹ ನಡೆಯಲಿದೆ. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯನಾರಾಯಣ ಆಚಾರ್ಯ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಲ್ಲದೆ ಪ್ರತಿದಿನ ಗಂಟೆ 7.30 ರಿಂದ ನಡೆಯುವ ಒಂದು ವಾರ ಕಾಲದ ಅಲಂಗಾರು ಸಾಂಸ್ಕೃತಿಕೋತ್ಸವದಲ್ಲಿ ಜುಲೈ 30ರಂದು ಕಾರ್ಕಳ ಯೋಗೇಶ್ ಕಿಣಿಯವರ ಭಜನ್ ಸಂಧ್ಯಾ, 31 ರಂದು ದೇವಿದಾಸ ವಿರಚಿತ ಯಕ್ಷಗಾನ ಶ್ರೀ ಕೃಷ್ಣ ಸಂಧಾನ, ಆಗಸ್ಟ್ 1ರಂದು ವಿದುಷಿ ಪ್ರಣತಿ ಚೈತನ್ಯ ಪದ್ಯಾಣರ ಪದ ಯಾನ ತಂಡದ ಭರತನಾಟ್ಯ, 2 ರಂದು ಕಲಾವಿಭೂಷಣ ಶಂಕುಟೈ ಹರಿಹರ ಸುಬ್ರಹ್ಮಣ್ಯ ಭಾಗವತ ರಿಂದ ನಾಮ ಸಂಕೀರ್ತನ, ಅಗೋಸ್ಟ್ 3 ರಂದು ಶನಿವಾರ ಮಧ್ಯಾಹ್ನ ಗಂಟೆ 2:00 ರಿಂದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರಿಂದ ಅಷ್ಟಾವಧಾನ, ಅಗೋಸ್ಟ್ 4 ರವಿವಾರ ಬೆಳಿಗ್ಗೆ ಗಂಟೆ 9 ರಿಂದ ಡಾ. ಗಣೇಶ್ ಕೊಲೆಕಾಡಿ ವಿರಚಿತ ತಾಳಮದ್ದಳೆ ತ್ರಿಯಂಬಕ ರುದ್ರ ಮಹಾತ್ಮ, ಅಗೋಸ್ಟ್ 5 ಸೋಮವಾರ ಸಂಜೆ ಗಂಟೆ 7:30 ರಿಂದ ಬೆಂಗಳೂರಿನ ಕುಮಾರಿ ಮೇಧ ವಿದ್ಯಾಭೂಷಣರ ಭಕ್ತಿ ಸಂಗೀತ, ಆಗಸ್ಟ್ 7 ರಂದು ಬುಧವಾರ ಸಂಜೆ ಗಂಟೆ 6 ರಿಂದ ಡಾ. ಗಣೇಶ್ ಕೊಲೆಕಾಡಿ ವಿರಚಿತ ಯಕ್ಷಗಾನ ಸಮರ ಸೌಗಂಧಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಈಶ್ವರ ಭಟ್ ಮತ್ತು ಮಕ್ಕಳು ತಿಳಿಸಿರುತ್ತಾರೆ.
