ಕಾರ್ಕಳ, ಜು 13: ಜುಲೈ 12 ರಂದು ನಡೆದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಮೇಲೆ ಡಿ ವೈ ಎಸ್ ಪಿಯವರು ದೌರ್ಜನ್ಯ ನಡೆಸಿದ್ದನ್ನು ಖಂಡಿಸಿ ಇಂದು ಕಾರ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿ ವೈ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಶಾಸಕರ ಹಣದ ದಾಹಕ್ಕೆ ಇಲಾಖೆ ಅಧಿಕಾರಿಗಳು ಬಲಿ ಆಗುತ್ತಿದ್ದಾರೆ, ಹಾಗೂ ಶಾಸಕರಿಂದಾಗಿ ಅಧಿಕಾರಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಶುಭದ ರಾವ್ ರವರು ಈ ಸಂದರ್ಭದಲ್ಲಿ ಮಾತನಾಡಿದರು. ಜನಪ್ರತಿನಿಧಿಗಳ ಮೇಲೆಯೇ ದೌರ್ಜನ್ಯ ಮಾಡುವ ಡಿವೈ ಎಸ್ ಪಿ ಯವರು ತಮ್ಮ ವರ್ತನೆಯನ್ನು ಬದಲಾವಣೆ ಮಾಡಲಿ ಹಾಗೂ ಶಾಸಕರಿಗೆ ಎಷ್ಟು ಕಾರ್ಕಳದಲ್ಲಿ ಹಕ್ಕಿದೆಯೋ, ಅಷ್ಟೇ ಹಕ್ಕು ಜನರಿಗೂ ಇದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಯವರು ಮಾತನಾಡುತ್ತಾ ನಾವೆಲ್ಲರೂ ವೀರಪ್ಪ ಮೊಯ್ಲಿ ಹಾಗೂ ಗೋಪಾಲ ಭಂಡಾರಿಯವರ ರಾಜಕೀಯ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದರು .
ವಿವೇಕ್ ಎಂಬ ವ್ಯಕ್ತಿ ನಿನ್ನೆ ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಪ್ರಸ್ತಾಪ ಮಾಡಿದಾಗ ಅತ ಕೇಳುವ ಪ್ರಶ್ನೆ ಗೆ ಅಡ್ಡಿ ತಂದು, ಪರಶುರಾಮ ಮೂರ್ತಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಇದನ್ನು ಯಾರೂ ಪ್ರಶ್ನೆ ಮಾಡೋದೇ ಬೇಡ ಎಂದು ಶಾಸಕರು ಹೇಳಿದರು.
ಜನಪರ ಕಾರ್ಯ ಮಾಡುವ ಇವರಿಗೆ ಪರಶುರಾಮ ವಿಚಾರದಲ್ಲಿ ಜನರಿಗೆ ಅನ್ಯಾಯ ಮಾಡುವುದು ಸರಿಯೇ ಎಂದು ಹೇಳುತ್ತಾ ಶಾಸಕರ ರಾಜಕೀಯ ದಾಹಕ್ಕೆ ಅಧಿಕಾರಿಗಳು ಬಲಿ ಬೀಳಬೇಡಿ ಎಂದ ಅವರು ಪೊಲೀಸ್ ಇಲಾಖೆ ಜನರಿಗೆ ಬಹಳ ಸೇವೆ ನೀಡುತ್ತಿದೆ. ಈ ಸೇವೆಯ ಪ್ರಾಮುಖ್ಯತೆ ಉಳಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು , ಬಹಳಷ್ಟು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಡಿ ವೈ ಎಸ್ ಪಿ ಗೆ ಗುಲಾಬಿ ಹೂ ನೀಡುವ ಮೂಲಕ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಿದರು.