ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್.ಜೆ.ಇ.ಸಿ) ಪುರುಷರ ತಂಡವು  ವಿಟಿಯು ಪುರುಷರ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು. 

10 ಮತ್ತು 11 ಜುಲೈ 2024 ರಂದು  ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಸ್.ಜೆ.ಇ.ಸಿಯ ದ್ವಿತೀಯ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನ  ಧವನ್ ರೈ ವಿಟಿಯು ರಾಜ್ಯ ಮಟ್ಟದಲ್ಲಿ 59 ಕೆಜಿ ವಿಭಾಗದ ಪವರ್‌ಲಿಫ್ಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕವನ್ನು ಪಡೆದರು ಮತ್ತು ದ್ವಿತೀಯ ವರ್ಷದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನ  ಹೃತಿಕ್ ಚಂದ್ ಅವರು ವಿಟಿಯು ರಾಜ್ಯ ಮಟ್ಟದ 120 ಕೆಜಿಗಿಂತ ಕೆಳಗಿನ ವಿಭಾಗದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ  ದೈಹಿಕ ಶಿಕ್ಷಣ ನಿರ್ದೇಶಕರು (ಪಿಇಡಿ), ವನೀಶಾ ವಿ ರೋಡ್ರಿಗಸ್ ಮತ್ತು ಸಹಾಯಕ ಪಿಇಡಿ,  ಸುಧೀರ್ ಎಂ ಅವರ ಮಾರ್ಗದರ್ಶನದಲ್ಲಿ ಚಿನ್ನದ ಪದಕವನ್ನು ಪಡೆದರು. ಈ ಅಗಾಧ ಸಾಧನೆಗಾಗಿ ಎಸ್‌ಜೆಇಸಿಯ ಆಡಳಿತ ಮಂಡಳಿಯು ಇಡೀ ತಂಡ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಅಭಿನಂದಿಸುತ್ತದೆ.