ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದರೆ: ಮೂಡುಬಿದರೆ ತಾಲೂಕಿನ ದರೆಗುಡ್ಡೆ ಗ್ರಾಮ ಸಭೆ ಆಗಸ್ಟ್ 12 ರಂದು ನಡೆಯಿತು. ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಮಾತನಾಡಿ ಗ್ರಾಮದ ಸ್ವಚ್ಛತೆ, ಕಸವಿಲೇವಾರಿ, ನೀರಿನ ಯೋಗ್ಯ ಬಳಕೆ ಇತ್ಯಾದಿಗಳನ್ನು ಗ್ರಾಮಸ್ಥರು ತಿಳಿಯಬೇಕಾಗಿದೆ ಎಂದರು.

ಕಸ ಎಸೆಯುವ ಬಗ್ಗೆ ಪ್ರಶ್ನಿಸಿದಾಗ ಗ್ರಾಮಸ್ಥರಲ್ಲಿ ವಿನ್ಸೆಂಟ್ ಅವರು ಆಯ್ಕೆಗೊಂಡ ಸದ್ಯರು, ಅಧಿಕಾರಿಗಳು  ಕಸ ಎಸೆಯುವವರನ್ನು ಹಾಕಿರುವ ಸಿ.ಸಿ.ಟಿವಿ ಮೂಲಕ ಹಿಡಿದು ದಂಡ ವಿಧಿಸಿ ಎಂದು ಆಗ್ರಹಿಸಿದರು. 

ಪಣಪಿಲ ಹಾಗೂ ಕಲ್ಲೇರಿಗಳಲ್ಲಿ ಆಟದ ಮೈದಾನದ ವ್ಯವಸ್ಥೆ ಮಾಡಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ತಿಳಿಸಿದರು. 

ಪಶು ಪ್ರಾಣಿಗಳ ತುರ್ತು ಚಿಕಿತ್ಸೆಗೆ 1962 ಗೆ ಫೋನ್ ಮಾಡಿದರೆ ಸೌಲಭ್ಯವಿದೆ. ರೇಬೀಸ್ ವ್ಯಾಕ್ಸಿನ್ ಎಲ್ಲ ನಾಯಿಗಳಿಗೂ ಕೊಡಿಸಿ ಎಂದು ಪಶುಸಂಗೋಪನಾ ಇಲಾಖೆಯ ಡಾ.ಗುರುರಾಜ್ ಕೇಳಿಕೊಂಡರು.

ಟಿ.ಬಿ.ಮುಕ್ತ ಗ್ರಾಮ ಮಾಡಲು ಸಹಕರಿಸಬೇಕೆಂದು ಆರೋಗ್ಯ ಇಲಾಖೆಯ ಮುತ್ತು ಕೇಳಿ ಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ಕಾತ್ಯಾಯಿನಿ,  ಕಂದಾಯ ಇಲಾಖೆಯ ಮಾಹಿತಿಯನ್ನು ಕಿಶೋರ್, ಅಬಕಾರಿ ಇಲಾಖೆಯ ಸುಧಾಕರ, ವೇದಿಕೆಯಲ್ಲಿ ಹಾಜರಿದ್ದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಳಿನಿ, ಸದಸ್ಯರುಗಳಾದ ಸುಭಾಶ್ಚಂದ್ರ ಚೌಟ, ಮುನಿರಾಜ ಹೆಗ್ಡೆ, ಸಂತೋಷ್ ಪೂಜಾರಿ, ಗಂಗಾ, ತುಳಸಿ ಮೂಲ್ಯ, ಪ್ರಸಾದ್, ಶಾಲಿನಿ, ಜನಿತಾ, ಶಶಿಕಲಾ, ದೀಕ್ಷಿತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸತ್ಯಭಾಮಾ ಕಾರ್ಯಕ್ರಮ ನಿರ್ವಹಿಸಿ ಅನುಪಾಲನಾ ವರದಿ ಮಂಡಿಸಿದರು. ನಯನಾ ವರದಿ ಮಂಡಿಸಿ ಜಮಾ ಖರ್ಚಿನ ವಿವರ ನೀಡಿದರು.