ಕುಂದಾಪುರ:- ಹೌದು ಸಿನಿಪ್ರಿಯರೇ !ಕರ್ನಾಟಕದಾದ್ಯಂತ ತನ್ನ ವಿಶಾಲ ರೆಕ್ಕೆಗಳನ್ನು ಚಾಚುತ್ತ ಬಹಳ ವೇಗದಲ್ಲಿ ಎಲ್ಲರನ್ನೂ ಆಕರ್ಷಿಸಿ ಬೆಳೆಯುತ್ತಿರುವ ಭಾರತ್ ಸಿನೆಮಾಸ್, ಭಾರತ್ ಸಮೂಹ ಸಂಸ್ಥೆಯ ನೇತೃತ್ವದಲ್ಲಿ   ಈಗ ನಿಮ್ಮ ಕುಂದಾಪುರಕ್ಕೂ ವೈಭವದಿಂದ ಕಾಲಿಟ್ಟಿದೆ. ಸಿನಿಮಾ ಕ್ಷೇತ್ರದಲ್ಲಿ ತನ್ನ ವೃತ್ತಿಪರತೆ ಮತ್ತು ಸೇವೆ ಸೌಲಭ್ಯಗಳನ್ನು ನೀಡುವಲ್ಲಿ ನಮ್ಮಅಂದರೆ "ಭಾರತ್ ಸಿನೆಮಾಸ್"ನ್ನು ಮೀರಿಸುವ ಮತ್ತೊಂದು ತಂಡವಿಲ್ಲ ಅಂದರೆ ಅತಿಶಯೋಕ್ತಿಯಾಗಲಾರದು.

ಕುಂದಾಪುರದ ಹಿರಿಮೆಗೆ ಕಳಶ ಪ್ರಾಯವಾಗಿ ಇದೀಗ  ನಿಮ್ಮ ಮುಂದೆ ತಲೆಯೆತ್ತಿ ನಿಂತಿರುವ ಭಾರತ್ ಮಲ್ಟಿಪ್ಲೆಕ್ಸ್‍ ಅತ್ಯಾಧುನಿಕ ಸೌಲಭ್ಯ ಮತ್ತು ಸುಂದರವಾದ ಹೊಸ ವಾಸ್ತು ವಿನ್ಯಾಸಗಳಿಂದ ಕಂಗೊಳಿಸುತ್ತಿದೆ.  ಇದು ಸಿನೆಮಾ ವೀಕ್ಷಣೆಯ ಉತ್ಕೃಷ್ಟ ಅನುಭವವನ್ನು ಎಲ್ಲರಿಗೂ ನೀಡಲಿದೆ. ನಾಲ್ಕು ವಿಶಾಲವಾದ ಸ್ಕ್ರೀನ್‍ಗಳ ಜತೆಗೆಒಟ್ಟು 511 ಆಸನಗಳ ಸೌಲಭ್ಯವಿರುವ ಈ ಮಲ್ಟಿಪ್ಲೆಕ್ಸ್‍ನಲ್ಲಿ 24 ಅದ್ಭುತ ಅನುಭವದ ರೆಕ್ಲೈನರ್ ಸುಖಾಸನಗಳಿವೆ.

ಕುಂದಾಪುರಕ್ಕೆ ಮೊದಲ ಮಲ್ಟಿಪ್ಲೆಕ್ಸ್ ಆಗಿರುವ ಇದರಲ್ಲಿ ಅತ್ಯುತ್ತಮ ಸಿನಿಮಾ ವೀಕ್ಷಣಾ ಅನುಭವ ನೀಡುವ  ಸಲುವಾಗಿ 2-ಕೆ ಡಿಜಿಟಲ್ ಪ್ರೊಜೆಕ್ಷನ್‍ ತಂತ್ರಜ್ಞಾನ ಆಳವಡಿಸಲಾಗಿದೆ. ಜತೆಗೆ ಪಾನಸೋನಿಕ್ ಲೇಸರ್ ಪ್ರೊಜೆಕ್ಟರ್,  3-ಡಿ ಪ್ರೊಜೆಕ್ಷನ್, ಅತಿ ಉತ್ಕೃಷ್ಟ ಹಾಗೂ ಅದ್ವಿತೀಯ ಸಿನಿಮಾ ಅನುಭವಕ್ಕಾಗಿ ಮತ್ತು ಡೋಲ್ಬಿನ ಅತಿ ಸ್ಪಷ್ಠ, ಸುಂದರ, ನಿಖರ ಧ್ವನಿ ವ್ಯವಸ್ಥೆಯನ್ನು  ಹೊಂದಿದೆ. ಕ್ಲಾರಿಸ್ ಸೀರೀಸ್‍ನ ಅತ್ಯುತ್ತಮ 2.7 ಗಳಿಕಾ ಗುಣಮಟ್ಟದ ಬೆಳ್ಳಿ ಪರದೆಅತಿ ಸ್ಪಷ್ಠ ದೃಶ್ಯಾನುಭವಗಳನ್ನು ನಿಮ್ಮೆಲ್ಲರಿಗೆ ನೀಡಲಿದೆ.

ವಿಶಾಲ ಸ್ಥಳಾವಕಾಶದ ಆಸನ ವ್ಯವಸ್ಥೆ,  ಅತ್ಯುತ್ತಮ ಹವಾನಿಯಂತ್ರಿತ ಸೌಲಭ್ಯತೆ, ಪೇಪರ್‍ರಹಿತ ಇ-ಟಿಕೆಟ್ ವ್ಯವಸ್ಥೆ, ಬಾಕ್ಸ್ ಆಪೀಸ್‍ಟಿಕೆಟ್ ವಿತರಣಾ ವ್ಯವಸ್ಥೆ ಎಲ್ಲವೂ ಗ್ರಾಹಕ ಸ್ನೇಹಿಯಾಗಿದೆ.

ಸಿನೇಮಾ ಜೊತೆ, ಇಲ್ಲಿನ ಅತ್ಯುತ್ತಮ ಆಹಾರ ವ್ಯವಸ್ಥೆ, ಕೆಫೆಟೇರಿಯಾ ಪಾರ್ಕಿಂಗ್ ವ್ಯವಸ್ಥೆಗಳು ನಿಮ್ಮೆಲ್ಲರನ್ನು ಸೂಜಿಗಲ್ಲಿನಂತೆ ಸೆಳೆದು,  ಇದು ನಿಮ್ಮ 'ಆಯ್ಕೆ'ಯ ಪರ್ಮನೆಂಟ್ ವೀಕೆಂಡ್‍ ಅಡ್ಡ' ಆಗುವುದರಲ್ಲಿ ಎರಡು ಮಾತಿಲ್ಲ. ಹೆಸರಾಂತ ಆರ್ಕಿಟೆಕ್ಟ್‍ ರಾಹುಲ್‍ ಜವೇರಿಯವರ ಆಡಿಟೋರಿಯಂ ಮತ್ತು ಲಾಬಿ ಡಿಸೈನ್‍ಗಳು ನಿಮ್ಮನ್ನಿಲ್ಲಿ ಮತ್ತೆ ಮತ್ತೆ ಬರುವಂತೆ ಮಾಡುತ್ತದೆ.

ಇವೆಲ್ಲವುಗಳ ಜತೆ ರಾಷ್ಟ್ರೀಯ ಹೆದ್ದಾರಿ 66 ರ ಸನಿಹದಲ್ಲೇ ನಮ್ಮ ಭಾರತ್ ಸಿನೆಮಾಸ್ ಮಲ್ಟಿಪ್ಲೆಕ್ಸ್ ಇರುವುದರಿಂದ  ಸುತ್ತ ಮುತ್ತಲ ಊರಿನ ಎಲ್ಲಾ ಜನರಿಗೆ  ಸುಲಭವಾಗಿ ಬಂದು ಹೋಗಲು ಸಾರಿಗೆ ವ್ಯವಸ್ಥೆಗೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಒಟ್ಟಿನಲ್ಲಿ ನಿಮಗಿದು ಸಿನೆಮಾ ವೀಕ್ಷಣೆಗಷ್ಟೇ ಸೀಮಿತವಾಗದೇ, ಮಕ್ಕಳಿಂದ ಹಿರಿಯರವರೆಗೂ ಅತ್ಯುತ್ತಮ ಮನೋರಂಜನೆಯ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮತ್ತೇಕೆ ತಡ ?ಇದೇ ಡಿಸೆಂಬರ್ 25ಕ್ಕೆ ನಾವು ಕಾರ್ಯಾರಂಭಿಸುತ್ತಿದ್ದೇವೆ. ನಿಮ್ಮ ಸೀಟುಗಳನ್ನು ಇಂದೇ ಕಾಯ್ದಿರಿಸಿ..!  ನಿಮ್ಮವರ ಜತೆ ಬಂದು ಸಿನೆಮಾ ನೋಡಿ. ನಮ್ಮ ತಂಡ ನಿಮ್ಮೆಲ್ಲರ ನಿರೀಕ್ಷೆಯಲ್ಲಿದೆ. ಬನ್ನಿ..! ನಿಮ್ಮಕುಂದಾಪುರದ ನಿಮ್ಮದೇ ಭಾರತ್ ಸಿನಿಮಾಸ್‍ಗೆ...!

ಕುಂದಾಪುರದ ಭಾರತ್ ಸಿನಿಮಾಸ್‍ನ ಉದ್ಘಾಟನೆಯನ್ನು ಕೆ.ಜಿ.ಎಫ್.ನ ಸಂಗೀತ ಸಂಯೋಜಕರಾದ ರವಿ. ಬಸ್ರೂರುರವರು ನೆರವೇರಿಸಿದರು. ಭಾರತ್ ಸಿನಿಮಾಸ್‍ನ ನಿರ್ದೇಶಕರಾದ ಸುಧೀರ್ ಎಂ. ಪೈ., ಬಾಲಕೃಷ್ಣ ಶೆಟ್ಟಿ ಹಾಗೂ ಕೋಸ್ಟಲ್‍ ಕ್ರೌನ್‍ನ  ಆಡಳಿತ ಪಾಲುದಾರರಾದ¸ ಪ್ರಕಾಶ್ ಲೋಬೊ ಸಮಾರಂಭದಲ್ಲಿ  ಉಪಸ್ಥಿತರಿದ್ದರು.