ಜಮ್ಮು ಕಾಶ್ಮೀರದ ಐದು ಕಡೆ ಎನ್‌ಕೌಂಟರ್ ನಡೆಸಿದ ಭದ್ರತಾ ಪಡೆಯವರು 5 ಜನ ಉಗ್ರರನ್ನು ಕೊಂದು ಕಳೆದಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಜೋದಾರ್‌ನಲ್ಲಿ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆಯವರು ಇಬ್ಬರು ತಯಬ ಉಗ್ರರನ್ನು ಮುಗಿಸಿದ್ದಾರೆ.
ಪುಲ್ವಾಮಾದಲ್ಲಿ ನಡೆದ ಇನ್ನೊಂದು ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯವರು ಮತ್ತಿಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಿರುವರು.
ಪುಲ್ವಾಮಾ ಜಿಲ್ಲೆಯ ಹಂದ್ವಾರದಲ್ಲಿ ನಡೆದ ಇನ್ನೊಂದು ಉಗ್ರ ದಮನದಲ್ಲಿ ಭದ್ರತಾ ಪಡೆಯವರು ಒಬ್ಬ ಉಗ್ರನನ್ನು ಶವವಾಗಿಸಿದ್ದಾರೆ. ಈತನನ್ನು ಹಿಜ್ಬುಲ್ ಸಂಘಟನೆಯ ಮೆಹ್ರಾಜುದ್ದೀನ್ ಹಲ್ವಾಯಿ ಅಲಿಯಾಸ್ ಉಬೈದ್ ಎಂದು ಗುರುತಿಸಲಾಗಿದೆ.