ಗಂಗಾವತಿಯ ಸಿಬಿಎಸ್ ಗಂಜ್ ಬನ್ನಿಗಿಡ ಕ್ಯಾಂಪ್ ಇಸ್ಲಾಂಪುರ ಬಳಿ ರಾಜಾ ಕಾಲುವೆ ಮೇಲೆ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲಾಗುತ್ತಿದ್ದುದನ್ನು ನಗರ ಸಭೆ ಜೆಸಿಬಿ ಬಳಸಿ ನೆಲಸಮ ಮಾಡಿತು.

ಪಿಲ್ಲರ್ ಮತ್ತು ಸ್ಲಾಬ್‌ಗಳನ್ನು ಪುಡಿ ಮಾಡಿದ ಅಕ್ರಮ ನಿರ್ಮಾಣಕ್ಕೆ ಆರಂಭದಲ್ಲೇ ಅಂತ್ಯ ಹಾಡಲಾಯಿತು.

ಕಳೆದ 10 ವರುಷಗಳಿಂದ ರಾಜಾ ಕಾಲುವೆ ಮೇಲೆ ಹಲವರು ಅಕ್ರಮ ನಿರ್ಮಾಣ ಮಾಡಿದ್ದಾರೆ. ಈಗಾಗಲೇ 50 ಶೇಕಡಾದಷ್ಟು ಹುಡುಕಿ ಒಡೆಯಲಾಗಿದೆ. ಉಳಿದವನ್ನು ಸಹ ನಾಶ ಪಡಿಸಲಾಗುವುದು ಎಂದು ಪೌರಾಯುಕ್ತ ಅರವಿಂದ ಜಮಖಂಡಿ ತಿಳಿಸಿದರು.