ಕೆಲವು ವರುಷಗಳ ಹಿಂದೆ ಬೆಂಗಳೂರಿನ ಬ್ರಿಗೇಡ್ ರೊಡಿನಲ್ಲಿ ಅರೆ ಕಿಲೋ ಗೂಸ್ ಬೆರಿ ಕೊಂಡುಕೊಂಡೆ. ಅದನ್ನು ಕೋಣೆಗೆ ಒಯ್ದು ತಿನ್ನುವಾಗ ಅಚ್ಚರಿ. ಆ ಅಚ್ಚರಿ ಏನೆಂದರೆ ಅದು ನಮ್ಮೂರ ಕಳೆ ಹಣ್ಣು ಅಜ್ಜಪೊತ್ತೆಲ್ (ಅಜ್ಜನತರಡು) ಅಲ್ಲದೆ ಬೇರೇನೂ ಅಲ್ಲ. 

ಅಜ್ಜಪೊತ್ತೆಲ್ ಇಲ್ಲವೇ ಗ್ರಾಂಡ್ ಫಾದರ್ಸ್ ಟೆಸ್ಟಿಕಲ್ಸ್ ಎಂಬ ಈ ಹಣ್ಣಿನ ಗಿಡ ಮಳೆಗಾಲದಲ್ಲಿ ಹುಟ್ಟುತ್ತದೆ, ಆಗಸ್ಟ್ ಸೆಪ್ಟೆಂಬರ್‌ಗಳಲ್ಲಿ ಕಿರು ಬೆರಿ ಹಣ್ಣು ನೀಡುತ್ತದೆ. ನಾನು ಅಂಗಡಿಯಲ್ಲಿ ಕೊಂಡುದು ಒಂಚೂರು ಮಾತ್ರ ದೊಡ್ಡದು ಎನ್ನುವುದು ಬಿಟ್ಟರೆ ಯಾವ ವ್ಯತ್ಯಾಸವೂ ಇಲ್ಲ.

ರೈಬ್ಸ್ ಗ್ರೋಸುಲಾರಿಯ ಜಾತಿಯಲ್ಲಿ ಇವನ್ನು ಮೇಲಂಗಿ ಗೂಸ್‌ಬೆರಿ ಎನ್ನುತ್ತಾರೆ.

ಮೇಲಂಗಿ ಇಲ್ಲದ ಹಲವಾರು ಬೆರಿಗಳು ಇದರಲ್ಲಿವೆ. ಅವನ್ನು ಗೂಸ್‌ಬೆರಿ ಎಂದಷ್ಟೆ ಹೇಳುತ್ತಾರೆ. ಅದರಲ್ಲೂ ಯೂರೋಪಿನ ನಾನಾ ಬಣ್ಣದ ಗೂಸ್‌ಬೆರಿಗಳು ಆಕರ್ಷಕ. ಕೆಲವು ತೀರಾ ಸಿಹಿಯವೂ ಇವೆ.

ನರ್ಸೆರಿಲಿವ್, ಕಲಂದರ್ ಮೊದಲಾದವು ಮುಖ್ಯವಾದವು. 

ನಮ್ಮ ಹುಳಿ ಮತ್ತು ಸಿಹಿ ನೆಲ್ಲಿಕಾಯಿಗಳೂ ಸಹ ಈ ಜಾತಿಗೇ ಸೇರಿವೆ. ಇವು ಮೇಲಂಗಿ ಹೊಂದಿಲ್ಲ. 

ತುಳುವಿನಲ್ಲಿ ಇದಕ್ಕೆ ಅಜ್ಜಪೊತ್ತೆಲ್ ಹೆಸರು ಬರಲು ಕಾರಣ ಅದರ ಸಡಿಲ ಮೇಲಂಗಿಯೇ ಆಗಿದೆ.

ಈ ಮರಿ ಹಣ್ಣುಗಳು ಹೊರಗಿನಿಂದ ಸಡಿಲ ಹೊದಿಕೆ ಹೊಂದಿವೆ.

Article byPerooru Jaru