ಜನರು ಹೊರಗೆ ಹೋದಾಗ ಏನು ತಿನ್ನುತ್ತಾರೆ, ಎಲ್ಲಿ ತಿನ್ನುತ್ತಾರೆ ಎಂದು ನಿರ್ಧರಿಸಲು ನೀವ್ಯಾರು ಎಂದು ಗುಜರಾತ್ ಹೈಕೋರ್ಟ್ ಅಲ್ಲಿನ ನಾನಾ ಮಹಾನಗರ ಪಾಲಿಕೆಗಳನ್ನು ತರಾಟೆಗೆ ತೆಗೆದುಕೊಂಡಿತು.

ಆಹಾರ ಅವರವರ ಆಯ್ಕೆ. ನಿಮ್ಮ ರಾಜಕೀಯ ಜನರ ಆಹಾರ ಆಯ್ಕೆಯಲ್ಲಿ ಬೆರೆಸಬೇಡಿ. ಮಾರಾಟಗಾರರು ನಿಯಮ ಮುರಿದರೆ ಕ್ರಮ ತೆಗೆದುಕೊಳ್ಳಬಹುದು. ಅಲ್ಲಿ ಮಾರಬೇಡಿ, ನಗರದೊಳಗೆ ಇರಬೇಡಿ ಎಂದು ಹೇಳಲು ನಿಮ್ಮನ್ನು ಜನ ಆರಿಸಿದ್ದಾರೆಯೇ ಎಂದು ಹೈಕೋರ್ಟ್ ಮುನಿಸಿಪಲ್ ಆಡಳಿತಗಳನ್ನು ತರಾಟೆಗೆ ತೆಗೆದುಕೊಂಡಿತು.