ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ವತಿಯಿಂದ ವೇಣುಗೋಪಾಲ್ ಹಾಗೂ ಶೇಖರ್ ಅಜೆಕಾರು ಸಂಸ್ಮರಣೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಾಳೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ವಕೀಲ ರಾಗಿದ್ದು, ಪ್ರೆಸ್ ಕ್ಲಬ್ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಿಸಿದ್ದ ವೇಣುಗೋಪಾಲ್ ಹಾಗೂ ಬಹುಮುಖ ಪ್ರತಿಭೆಯ ಪತ್ರಕರ್ತ ಶೇಖರ್ ಅಜೆಕಾರು ಅವರ ಸಂಸ್ಮರಣೆ ನಡೆಯಲಿದೆ. ಮಾಧ್ಯಮ ಮತ್ತು ವಿಶ್ವಾಸಾರ್ಹತೆ ಬಗ್ಗೆ ರವೀಂದ್ರ ಶೆಟ್ಟಿ ಮಾತನಾಡಲಿದ್ದಾರೆ. ತರುವಾಯ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.