ಸ್ವಕ್ಷೇತ್ರ ಕೊರಟಗೆರೆಯ ಶಿಕ್ಷಣ ದಿನಾಚರಣೆಯಲ್ಲಿ ಭಾಗವಹಿಸಿದ ಗೃಹ ಮಂತ್ರಿ ಜಿ. ಪರಮೇಶ್ವರ ಅವರು ಹಿಂದೂ ಧರ್ಮ ಹುಟ್ಟಿಸಿದ್ದು ಯಾರು ಎಂದು ಗಟ್ಟಿಯಾಗಿ ಪ್ರಶ್ನಿಸಿದ್ದಾರೆ.

ಭಾರತದಲ್ಲೇ ಹುಟ್ಟಿದ ಬೌದ್ಧ, ಜೈನ, ಸಿಖ್ ಮೊದಲಾದ ಧರ್ಮಗಳು ಮತ್ತು ವಿದೇಶಗಳಿಂದ ಬಂದ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಿಗೆ ಸ್ಥಾಪಕರು ಇದ್ದಾರೆ. ನಿಶ್ಚಿತ ಚೌಕಟ್ಟು ಇದೆ. ಹಿಂದೂ ಧರ್ಮಕ್ಕೆ ಏನಿದೆ. ಅದೇ ವೇಳೆ ಈ ಧರ್ಮ ಯಾವಾಗ ಹುಟ್ಟಿತು ಎನ್ನುವುದೂ ಗೊತ್ತಿಲ್ಲ. ಹಿಂದೂ ಹೆಸರು ಕೊಟ್ಟವರು ವಿದೇಶೀಯರು. ಇದು ಹಿಂದೂ ಧರ್ಮದ ದೊಡ್ಡ ಗೊಂದಲ ಎಂದು ಪರಮೇಶ್ವರ ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗೌರಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರಕಾಶರಾಜ್ ಅವರು ನಾನು ನನ್ನ ಅಪ್ಪ ಅಮ್ಮನಿಗೆ ಹುಟ್ಟಿದ್ದೇನೆ ಸನಾತನ ಧರ್ಮಕ್ಕೆ ಅಲ್ಲ ಎಂದಿದ್ದಾರೆ.