ಮುಂಬಯಿ ಅಂಧೇರಿಯ ಮರೋಲ್‌ನ ಫ್ಲಾಟ್ ಒಂದರಲ್ಲಿ ವಾಸವಿದ್ದ ಏರ್ ಇಂಡಿಯಾ ಗಗನಸಖಿ ತರಬೇತಿಯಲ್ಲಿ ಇದ್ದ ಚತ್ತೀಸಗಡ ಮೂಲದ ತರುಣಿ ಸತ್ತು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ದುರಂತ ಸಾವು ಕಂಡವರು 24ರ ರೂಪಲ್ ಓಗ್ರೆ. ನಿನ್ನೆ ಮನೆಯವರು ಫೋನ್ ಮಾಡಿದಾಗ ಅದನ್ನು ಎತ್ತುವವರಿರಲಿಲ್ಲ. ಅವರು ಪರಿಚಿತರಿಗೆ ಫೋನ್ ಮಾಡಿ ನೋಡಲು ಹೇಳಿದ್ದಾರೆ. ತಿಳಿದವರು ಹೋಗಿ ನೋಡಿದಾಗ ರೂಪಲ್ ನೆತ್ತರ ನಡುವೆ ಸತ್ತು ಬಿದ್ದಿರುವುದು ಕಂಡು ಬಂತು. 

ಅಲ್ಲಿನ ಸ್ವೀಪರ್ ವಿಕ್ರಮ್ ಅತ್ವಾಲನನ್ನು ಆತನ ಮಡದಿಯನ್ನು ಪೋಲೀಸರು ವಿಚಾರಿಸುತ್ತಿದ್ದಾರೆ. ಅಂದು ಆತ ಯಾಕೆ ಆ ಫ್ಲಾಟ್ ಒರೆಸಲು ಹೋಗಿಲ್ಲ? ಪೋಲೀಸರು 12 ತಂಡ ರಚಿಸಿ ಕೊಲೆಗಾರನ ಬೇಟೆಗೆ ಹೊರಟಿದ್ದಾರೆ.