ಜಪಾನಿನ ಟೆನ್ನಿಸ್ ಆಟಗಾತಿ ನವೋಮಿ ಒಸಾಕಾ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಗಳಿಕೆಯ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

4 ಗ್ರಾನ್‌ಸ್ಲಾಮ್ ಒಡತಿಯಾದ ಇವರು ಆಟ ಮತ್ತು ಒಪ್ಪಂದಗಳ ಮೂಲಕ 2021ರಲ್ಲಿ 57.3 ಮಿಲಿಯ ಡಾಲರ್ ಎಂದರೆ 423.59 ಕೋಟಿ ರೂಪಾಯಿ ಗಳಿಸಿದ್ದಾರೆ.

ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ‌ಸಹೋದರಿಯರು 2 ಮತ್ತು 3ನೆಯ ಸ್ಥಾನಗಳಲ್ಲಿ ಇದ್ದಾರೆ. 

ಭಾರತದ ಮಹಿಳಾ ಆಟಗಾತಿಯರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಕಳೆದ ವರುಷ ರೂ. 3.24 ಕೋಟಿ ಗಳಿಸಿದ್ದಾರೆ.