ಮಂಗಳೂರು, ಜೂನ್ 13: ಚಿರಂಜೀವಿ ಆರ್. ರಾಜ್ಯ ಯುವ ಕಾಂಗ್ರೆಸ್ ವಕ್ತಾರರು ದಕ್ಷಿಣ ಕನ್ನಡ ಜಿಲ್ಲೆಯ ಯಂಗ್ ಇಂಡಿಯಾ ಬೋಲ್ 2 ಯುವ ಸ್ಪರ್ಧೆಯ ಉಸ್ತುವಾರಿ ಆಗಿರುವರು. ನಾನಾ ಬಹುಮಾನಗಳಿರುವ ಇದರಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದರು.

ಉತ್ತರ ಪ್ರದೇಶದಲ್ಲಿ ಸಿದ್ಧ ನ್ಯಾಯದಂತೆ ಬುಲ್ಡೋಜರ್ ರಾಜ್ಯ ನಡೆದಿದೆ. ಜೆಎನ್‌ಯು ವಿದ್ಯಾರ್ಥಿ ನಾಯಕಿಯಾಗಿದ್ದ ಫಾತಿಮಾ ಅವರ ಮನೆಯನ್ನು ಅವರ ತಂದೆ ಪ್ರತಿಭಟನೆ ನಡೆಸಿದರು ಎಂದು ಬುಲ್ಡೋಜರ್ ಹಾಯಿಸಿ ಒಡೆಯಲಾಗಿದೆ. ಇಂತಾ ಕಾನೂನು ಬಾಹಿರ ನ್ಯಾಯವನ್ನು ಖಂಡಿಸುವುದಾಗಿ ಲುಕ್ಮಾನ್ ಹೇಳಿದರು.

ಈ ಹೆಡಗೆವಾರ್, ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಪರ ಇದ್ದವರು ಎಂದು ದಾಖಲಾಗಿದೆ. ಅಂಥವರ ಪಾಠದಿಂದ ಏನು ಪ್ರಯೋಜನ? ನಾವು ಬುದ್ಧಿಜೀವಿಗಳ ಮೂಲಕ ಈ ಬಗೆಗೆ ನಾನಾ ನಿಟ್ಟಿನ ಚಿಂತನ ಮಂಥನ ನಡೆಸುವುದಾಗಿ ಲುಕ್ಮಾನ್ ಹೇಳಿದರು.

ಚಿರಂಜೀವಿ ಅವರು ಮಾತನಾಡಿ ಯಂಗ್ ಇಂಡಿಯಾ ಬೋಲ್ 2 ರಾಹುಲ್ ಗಾಂಧಿಯವರ ಕನಸಿನ ಕಾರ್ಯಕ್ರಮ. ಬಿಜೆಪಿಯ ಡಬಲ್ ಎಂಜಿನ್ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. ಯುವಕರಿಗೆ ಸ್ಪಷ್ಟ ರಾಜಕೀಯ ವೇದಿಕೆ ಕಲ್ಪಿಸಲು ಈ ಯಂಗ್ ಇಂಡಿಯಾ ಬೋಲ್ ನಡೆಯುತ್ತದೆ. ಜೂನ್ 25ರಂದು ಜಿಲ್ಲೆಯ ಸ್ಪರ್ಧೆಯಲ್ಲಿ 10 ಜನರನ್ನು ಆರಿಸಿ ರಾಜ್ಯ ಮಟ್ಟಕ್ಕೆ. ಮುಂದೆ ಅಲ್ಲಿಂದ ಗೆದ್ದವರನ್ನು ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗುವುದು. ಎಲ್ಲ ಸ್ಪರ್ಧೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇದೆ. ಹಿಂದಿ, ಇಂಗ್ಲಿಷ್, ರಾಜ್ಯಗಳ ಭಾಷೆಗಳಲ್ಲಿ ನಡೆಯುತ್ತದೆ. ಶುಲ್ಕ ರೂ. 100. ನಾನಾ ಬಹುಮಾನಗಳು ಇವೆ.

ಹಿಟ್ಲರ್‌ಶಾಹಿ ಆಡಳಿತ, ಬುಲ್ಡೋಜರ್‌ಗೆ ರಾಜ್ಯದಲ್ಲಿ ಅವಕಾಶ ಇಲ್ಲ. ಬುಲ್ಡೋಜರ್ ಬಂದರೆ ನಮ್ಮನ್ನು ದಾಟಿ ಹೋಗಬೇಕಾಗುತ್ತದೆ. ಬಿಜೆಪಿಯ ಹಾರಾಟ ಆರುವ ಮೊದಲ ದೀಪದಂತೆ ಎಂದು ಪ್ರಶ್ನೆಗೆ ಅವರು ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಸ್ಮಾಯಿಲ್, ನಬೀದ್, ಸಮ್ರಾನ್ ಉಪಸ್ಥಿತರಿದ್ದರು.