ಚಿಕ್ಕಮಗಳೂರು ಜಿಲ್ಲೆಯ ಜೋಗಿಕುಂಬ್ರಿ ಗ್ರಾಮದ, ಕಳಸದ ಪಿಯು ಕಾಲೇಜಿನಲ್ಲಿ ಪಿಯುಸಿ ಮೊದಲ ವರುಷ ಓದುತ್ತಿದ್ದ 17ರ ಯುವತಿ ವಂಚಿಸಿದ ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತನ ವಿರುದ್ಧ ಮರಣ ಪತ್ರ ಬರೆದಿಟ್ಟು ತಾಕೊಲೆ ಮಾಡಿಕೊಂಡಿದ್ದಾಳೆ.

ಈ ಬಗೆಗೆ ಹುಡುಗಿಯ ತಂದೆ ಚನ್ನೇಗೌಡರು ಕುದುರೆಮುಖ ಠಾಣೆಯಲ್ಲಿ ದೂರು ನೀಡಿದರೂ ಠಾಣೆಯವರು ಅಲಕ್ಷ್ಯ ಮಾಡಿದ್ದಾರೆ. ಎಸ್‌ಪಿ ಎದುರು ಮನೆಯವರು ದೂರು ತೋಡಿಕೊಂಡ ಮೇಲೆ, ಅವರು ಉಗಿದ ಮೇಲೆ ಕುದುರೆಮುಖ ಪೋಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ‌ ಬಿಜೆಪಿ, ಭಜರಂಗದಳದ ಕಾರ್ಯಕರ್ತನಾದ ಯುವಕ ನಿತೇಶ್ ಪರಾರಿಯಾಗಿದ್ದಾನೆ.

ಪರಿಚಿತ ದೀಪ್ತಿ, ನಿತೇಶ್ ಒಂದು ವರುಷದಿಂದ ಪ್ರೀತಿಸುತ್ತಿದ್ದರು. ಹೊಸ ವರುಷದ ವೇಳೆ ಜಗಳವಾಡಿದ ನಿತೇಶ್ ತನ್ನನ್ನು ನೋಡದಂತೆ ಬೆದರಿಸಿದ್ದಾನೆ. ಜನವರಿ 10ರಂದು ನೊಂದ ತರುಣಿ ಕೀಟನಾಶಕ ಸೇವಿಸಿದ್ದಾನೆ. ಸ್ಥಳೀಯ ಚಿಕಿತ್ಸೆ ನೀಡಿ, ಮಂಗಳೂರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದೀಪ್ತಿ ಜನವರಿ 14ರಂದು ಸಾವಿಗೀಡಾಗಿದ್ದಾಳೆ. ಕೀಟನಾಶಕ ಸೇರಿಸುವುದಕ್ಕೆ ಮೊದಲ ಆಕೆ ಬರೆದಿಟ್ಟ ಮರಣ ಪತ್ರ ಸಿಕ್ಕಿದೆ.