ಮಂಗಳೂರು: ಕದ್ರಿಹಿಲ್ಸ್ ಮಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಜನವರಿ 20ರಂದು ಮಂಗಳೂರಿನ ಖ್ಯಾತ ವೈದ್ಯ ಹಾಗೂ ಲೇಖಕ ಡಾ. ಸುರೇಶ್ ನೆಗಳಗುಳಿಯವರಿಗೆ “ಸಾಧಕ ಸನ್ಮಾನ” ನೀಡಿ ಗೌರವಿಸಲಾಯಿತು. ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹಾಗೂ ಅವರ ಧರ್ಮಪತ್ನಿ ಡಾ. ಸುರೇಶ್ ನೆಗಳಗುಳಿಯವರಿಗೆ ಹಾರ, ಹಣ್ಣು ಮತ್ತು ಶಾಲು ಅರ್ಪಿಸಿ ಪುರಸ್ಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕಾತ್ಲಡ್ಕ ಸಂಜೀವ ಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರಾದ ಲ. ಮಾಲಾ ಕಿಶೋರ್, ಲ. ಸ್ಮಿತಾ ಮಹೇಶ್, ಲ. ವಿದ್ಯಾ ಕಾಮತ್, ಲ. ಪ್ರಶಾಂತ್ ಪೈ, ಲ. ಪೂಜಾ ಪೈ, ಲ. ಪ್ರವೀಣ ಶೆಟ್ಟಿ, ಲ. ಎನ್.ಟಿ. ರಾಜ್, ಲ. ಕೇಶವ ಭಟ್, ಲ. ಜ್ಯೋತಿ ಭಟ್, ಲ. ಗೋವಿಂದ ಶರ್ಮ, ಲ. ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಆಕಾಶವಾಣಿ ಉದ್ಘೋಷಕಿ ಮಂಜುಳಾ ಪ್ರವೀಣ ನಡೆಸಿದರು. ಲ. ಸುಜಿತ್ ಕುಮಾರ್ ಅವರು ಡಾ. ಸುರೇಶ್ ನೆಗಳಗುಳಿಯವರ ಪರಿಚಯ ವಾಚನ ಮಾಡಿದರು.
