ವರದಿ ರಾಯಿ ರಾಜ ಕುಮಾರ
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯಿತಿಗೆ ಇತ್ತೀಚಿಗೆ ಚುನಾವಣೆ ಜರಗಿತ್ತು. ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಭಾರತೀಯ ಜನತಾ ಪಕ್ಷ ಮುಂಚೂಣಿಯಲ್ಲಿ ಮೂಡಿಬಂದಿತ್ತು. ಇದೀಗ ನಡೆದ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಜನವರಿ 23 ರಂದು ನಡೆಯಿತು.

ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಲೋಕೇಶ್ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶರ್ಮಿಳಾ ಶೆಟ್ಟಿ ಆಯ್ಕೆಗೊಂಡರು. ಆಯ್ಕೆಗೊಂಡ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅಭಿನಂದಿಸಿದರು.
