
Article Writer
Naveen Habib- Lecturer
ಇಂದು ಮತ್ತೆ ಅವಳ ಬರುವ ದಾರಿ ಕಾಯುತ್ತ ಬಸ್ ನಿಲ್ದಾಣದಲ್ಲಿ, ಆ ಬಸ್ ನ ಕಾಯುತ್ತ ತುಂಬಿದ ಜನಸಮೂಹದ ಮದ್ಯೆ ಒಂದು ಕಡೆಗೆ ನಾ ನನ್ನ ಬಸ್ಸಿನ ದಾರಿ ನೋಡುತ್ತಾ ನಿಂತಿದ್ದೆ.
ಮನಸ್ಸಲ್ಲಿ ನಾನಾ ತರಹದ ಭಾವನೆಗಳು, ವಿಚಾರಗಳು, ಆಲೋಚನೆಗಳು, ತುಳುಕುತ್ತಿದ್ದವು.ಆದರೆ ನನ್ನ ಕಣ್ಣುಗಳು ಬಸ್ ನಿಲ್ದಾಣದಲ್ಲಿ ಬರುವ ಪ್ರತಿ ಬಸ್ಸಿನಲ್ಲೂ ಅವಳನ್ನು ಹುಡುಕುತ್ತಿದ್ದವು.
ಒಂದು ಕಡೆ ನಾನು ಅವಳ ಬರುವ ದಾರಿ ಕಾಯುತ್ತಿದ್ದರೆ. ಮತ್ತೊಂದು ಕಡೆಗೆ ಕೆಲ ಜನರು ತನ್ನವರ ಬಳಿ ಹೋಗುವ ಖುಷಿಯಲ್ಲಿದ್ದರೂ, ಕೆಲ ಜನರು ತನ್ನವರ ಬರುವಿಕೆಗಾಗಿ ಕಾಯುತಿರುವ ಖುಷಿಯಲ್ಲಿದ್ದರೂ.ಗೊತ್ತಿಲ್ಲ ಈ ಬಸ್ ನಿಲ್ದಾಣದಲ್ಲಿ ಎಷ್ಟು ಜನರ ಪ್ರೀತಿ, ನೆನಪುಗಳು, ಭಾವನೆಗಳು, ಅಡಗಿವೆಯೋ.


ಬಸ್ ನಿಲ್ದಾಣಿನಲ್ಲಿ ನನ್ನ ಅಕ್ಕ ಪಕ್ಕ ಇರುವ ಕೆಲ ಜನರ ಮುಖದಲ್ಲಿ ಅವರ ಊರಿಗೆ ಹೋಗುವ ಖುಷಿ ಕಾಣುತ್ತಿದ್ದರೆ, ಇನ್ನು ಕೆಲ ಜನರ ಮುಖದಲ್ಲಿ ಮನೆಯ ಜವಾಬ್ದಾರಿ ಮತ್ತು ಅಸಹಾಯಕ ಪರಿಸ್ಥಿತಿಯಿಂದಾಗಿ ಒಲ್ಲದ ಮನಸಿನಿಂದ ಊರು ಬಿಡುವ ದುಃಖ ಕಾಣುತಿತ್ತು.
ಜನರನ್ನು ತನ್ನವರ ಬಳಿ ಹೋಗುವ ಮತ್ತು ತನ್ನವರಿಗಾಗಿ ಕಾಯುವ ಸನ್ನಿವೇಶಗಳನ್ನ ನೋಡುತ್ತಾ ಗೊತ್ತಿಲ್ಲ ಸಮಯವೂ ಹೇಗೆ ಓಡಿತ್ತೋ, ಇಂದು ಕೂಡ ನನ್ನವಳ ಬರುವ ದಾರಿ ಕಾಯುತ್ತ ಅವಾಗಾಗಲೇ ಆ ಬಸ್ಸು ಹೊರಟು ಹೋಗಿತ್ತು…..

