
Article Writer
Naveen Habib
Teacher
ಬಹುದಿನಗಳ ಮೇಲೆ ಸಿಕ್ಕಳು ಓರ್ವ ಬಹು ಕೊಪದ ಗೆಳತಿ, ಮೊದ ಮೊದಲು ನೋಡಿದಾಗ ಅನಿಸಿತು ಭಾವನೆಗಳಿಲ್ಲದ ಮನಸ್ಸು ಆ ಗೆಳತಿಯದೆಂದು,ಆದರೆ ಕೆಲ ದಿನಗಳು ಕಳೆದ ನಂತರ ತಿಳಿಯಿತು ಅವಳ ಭಾವನೆಗಳೇ ಅವಳ ಕೋಪಕ್ಕೆ ಕಾರಣಗಳೆಂದು
ನನ್ನ ಗೆಳತಿಯ ಮನಸ್ಸು ಪುಟ್ಟ ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಶ, ಅವಳು ಅವಳ ಭಾವನೆಗಳನ್ನ ಪುಟ್ಟ ಮಕ್ಕಳ ಹಠ ಕೋಪದಂತೆ ಹೊರಹಾಕುತ್ತಾಳೆ. ನೋಡುಗರು ಅವಳ ಮಾತುಗಳನಲ್ಲ ಅವಳ ಮಾತುಗಳ ಹಿಂದೆ ಇರುವ ಭಾವಗಳನ್ನ ನೋಡಿ.
ಹೇ ಗೆಳತಿ ಕೆಲವೊಮ್ಮೆ ನಾನು ನಿನ್ನ ಮೇಲೆ ತುಂಬಾ ಕೋಪಗೊಳ್ಳುತ್ತೇನೆ,ಮತ್ತು ಹೃದಯದ ಕೋಪವನ್ನು ಹೊರಹಾಕಲು ಕೂಡ ಬಯಸುತ್ತೇನೆ,ಆದರೆ ಯಾವಾಗ ನಿನ್ನ ತರ್ಲೆ ಧ್ವನಿಯನ್ನ ಕೇಳುತ್ತೇನೋ ಅವಾಗ ಆ ಕೋಪ ಪ್ರೀತಿಯಾಗಿ ಬದಲಾಗುತ್ತೆ.
ಹೇ ಗೆಳತಿ ನಿನ್ನ ಕೋಪವು ಎಷ್ಟು ಮಧುರವಾಗಿದೆ ಅಂದರೆ,ದಿನವಿಡೀ ನಿನ್ನ ಸತಾಯಿಸುತ್ತ ನಿನ್ನ ಮುಗ್ದ ಕೋಪವು ನೋಡುವ ಇಚ್ಛೆಯಾಗುತ್ತದೆ.ನಿಮ್ಮನ್ನ ಕೋಪ ಗೊಳಿಸುವದು ಕೂಡ ನನ್ನದೊಂದು ಪಿತೂರಿಯಾಗಿದೆ.
ಹೇ ಗೆಳತಿ ನಿನ್ನ ಮನಸ್ಸಿನ ಬೆಂಕಿಯನ್ನ ಯಾವತ್ತೂ ನಿನ್ನ ತುಟಿಗಳ ಮೇಲೆ ತರಬೇಡ,ಏಕೆಂದರೆ ಕೆಲವು ಸಲ ಆ ಕೋಪಕ್ಕೆ ಅಮಾಯಕರು ಸುಟ್ಟು ಹೋಗುತ್ತಾರೆ.
ಹೇ ಗೆಳತಿ ಈ ಜೀವನದ ದಾರಿಯಲ್ಲಿ ಈ ನಿನ್ನ ಸ್ನೇಹಿತ ಸದಾ ನಿನ್ನೊಡನೆ ಇರುತ್ತಾನೆ.ನಿನ್ನ ಈ ಮುಗ್ದ ಹೃದಯವನ್ನು ನಾನು ಎಂದಿಗೂ ಮುರಿಯುವದಿಲ್ಲ.ನಿನಗೆ ನನ್ನ ಮೇಲೆ ಎಷ್ಟೇ ಕೋಪ ಬಂದರು ಆ ಕೋಪದಲ್ಲಿ ಏನೇ ಅಂದರು ನಾನು ಬೇಸರವಾಗುವದಿಲ್ಲ.
ಏಕೆಂದರೆ ಮೇಲಿಂದ ಕೋಪವ ತೋರುತ್ತಾ, ಒಳಗಿನಿಂದ ಪ್ರೀತಿಸೋ ಮುಗ್ದ ಮನಸ್ಸು ನಿಮ್ಮದು..
