ಶಿವ ಅಭಿಷೇಕ ಪ್ರಿಯ. ಹಾಲಿನ ಅಭಿವೇಕದಿಂದ ಲಿಂಗಕ್ಕೆ ಶಿವ ತತ್ವವು ಆಕರ್ಷಿಸಲ್ಪಡುತ್ತದೆ. ತರುವಾಯ ತೀರ್ಥರೂಪದಲ್ಲಿ ಅದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಅದು ಲಾಭವನ್ನು ನೀಡುತ್ತದೆ.
ಶಿವ ಎಂದರೆ ಸ್ವಯಂ ಸಿದ್ಧ ಮತ್ತು ಸ್ವಯಂ ಪ್ರಕಾಶಿತ ಹಾಗೂ ಜಗತ್ತನ್ನೇ ಬೆಳಗಿಸುವವನು ಎಂದು ಅರ್ಥ. ಶಿವ ಎಂದರೆ ಮಂಗಲಮಯ ಹಾಗೂ ಕಲ್ಯಾಣ ಸ್ವರೂಪಿ ಎಂದು ತಿಳಿಯಲಾಗಿದೆ.

ಸ್ವಯಂ ಭೂಲಿಂಗ ಮತ್ತು ಚಲಲಿಂಗ (ಮನೆಯಲ್ಲಿ ಪೂಜಿಸುವ ಲಿಂಗ) ಗಳಿಗೆ ಅನ್ವಯಿಸದ ಹಾಗೂ ಕೇವಲ ಮಾನವ ಸ್ಥಾಪಿತ ಶಿವಲಿಂಗಕ್ಕೆ ಮಾತ್ರ ಅನ್ವಯಿಸುವ ಕೆಲವು ನಿಯಮಗಳಿವೆ. ಅದುವೇ ಶಿವಲಿಂಗದ ಹರಿನಾಳ (ತೀರ್ಥ ಹರಿಯುವ ಮಾರ್ಗ) ವನ್ನು ದಾಟದಿರುವುದು. ಮಾನವ ಸ್ಥಾಪಿತ ಶಿವಲಿಂಗದ ದೇವಾಲಯದಲ್ಲಿ ಮಾತ್ರ ಪ್ರದಕ್ಷಿಣೆಯನ್ನು ಅರ್ಧ ಚಂದ್ರನಂತೆ ಹಾಕಬೇಕು. ಯಾವುದೇ ಸಂದರ್ಭದಲ್ಲೂ ಹದಿನಾಳವನ್ನು ದಾಟಬಾರದು. ಏಕೆಂದರೆ ಹದಿನಾಳವನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ಜನನಿಂದ್ರಿಯದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತದೆಂದು ಹೇಳಲಾಗುತ್ತದೆ.
ಬೋಲೆನಾಥ ಶಂಕರ ಭಕ್ತರ ಅಭೀಷ್ಟ ಫಲದಾಯಕ. ಸಮಸ್ಯೆಗಳಿಂದ ಮುಕ್ತಿಗೆ, ಕೆಟ್ಟ ಶಕ್ತಿಗಳ ನಾಶಕ್ಕೆ ಶಿವನ ತ್ರಿಶೂಲದ ಮೂರು ಮೊನೆಗಳು ಸಂಕೇತಿಸುತ್ತವೆ. ತ್ರಿನೇತ್ರ ನ ತ್ರಿಕಾಲ ಜ್ಞಾನಕ್ಕೆ ಅದು ಪ್ರತ್ಯೇಕದಂತಿದೆ. ಸತ್ವ, ರಜ, ತಮ ಗುಣಗಳ ಪ್ರತ್ಯೇಕವಾದ ತ್ರಿಶೂಲದ ಮೂರು ಮೊನೆಗಳು ಮನುಷ್ಯನಲ್ಲಿ ಅವುಗಳನ್ನು ನಿಯಂತ್ರಿಸಲು ಸೂಚಿಸುತ್ತದೆ.
ಶಿವಲಿಂಗದ ಮೇಲೆ ತ್ರಿಪುಂಡ್ರ ವನ್ನು ಹಚ್ಚಿರುತ್ತಾರೆ. ಇದಕ್ಕಾಗಿ ವಿಭೂತಿಯನ್ನು ಉಪಯೋಗಿಸಲಾಗುತ್ತದೆ. ವಿಭೂತಿಯೆಂದರೆ ಪವಿತ್ರ ಬೂದಿ. ಒಣಗಿದ ಗೋಮಯ, ಅಕ್ಕಿಯ ತೌಡು, ಶಮಿ, ಅಶ್ವಥ, ವಟ ವೃಕ್ಷಗಳ ಕಟ್ಟಿಗೆ ಹಾಗೂ ಇತರ ವಸ್ತುಗಳನ್ನು ಸೇರಿಸಿ ಉರಿಸಿ ಪಡೆಯುವ ಪವಿತ್ರ ಭಸ್ಮ ವಿಭೂತಿ. ಅದನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಗೌರವ, ಆರೋಗ್ಯ ಹೆಚ್ಚುತ್ತದೆ. ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳು, ನಕಾರಾತ್ಮಕ ವಿಷಯಗಳು ಬರುವುದಿಲ್ಲ. ಮನಸ್ಸು ಸಾತ್ವಿಕ, ಸಕಾರಾತ್ಮಕ, ಇದ್ದು ದೇಹದಲ್ಲಿರುವ ಸಪ್ತಚಕ್ರಗಳು ನಿಯಂತ್ರಣದಲ್ಲಿರುತ್ತದೆ.
ವಿಭೂತಿಯ ಉಪಯೋಗದಿಂದ ತಲೆನೋವು ಕಡಿಮೆಯಾಗುತ್ತದೆ. ದೇಹದ ಅನಗತ್ಯ ತೇವಾಂಶವನ್ನು ಅದು ಹೀರಿಕೊಂಡು ಶೀತದಿಂದಲೂ ರಕ್ಷಣೆಯನ್ನು ನೀಡುತ್ತದೆ ಎಂದು ಸಿದ್ಧವಾಗಿದೆ.
ಭಗವಾನ್ ಮಹಾದೇವನ ಪೂಜೆಯನ್ನು ಭೂಮಿಯಲ್ಲಿ ಲಿಂಗ ರೂಪದಲ್ಲಿ ಮಾಡಲಾಗುತ್ತದೆ. ಶಿವನ ಲಿಂಗವನ್ನು ಪೂಜಿಸುವುದೆಂದರೆ ನಿಸರ್ಗ ಮತ್ತು ದೇವರನ್ನು ಪೂಜಿಸಿದಂತೆ. ವಿವಿಧ ನಮೂನೆಯ ಶಿವಲಿಂಗಗಳಲ್ಲಿ ಸ್ಪಟಿಕದ, ಕಪ್ಪು ಕಲ್ಲಿನ, ಹಿತ್ತಾಳೆಯ, ಬೆಳ್ಳಿಯ, ಅಮೃತಶಿಲೆಯ ಹಾಗೂ ಪಾದರಸದ ಶಿವಲಿಂಗಗಳು ಮುಖ್ಯವಾದವುಗಳು. ಪ್ರತಿ ಶಿವಲಿಂಗದ ಪೂಜೆಯಿಂದಲೂ ಗ್ರಹಗಳ ಕಾರಕತ್ವದ ಪರಿಣಾಮವನ್ನು ತಿಳಿಸಲಾಗಿದೆ.
.
