ಅಂತರಾಷ್ಟ್ರೀಯ ಮಹಿಳೆಯರ ದಿನ’ವನ್ನು ಪ್ರಥಮ ಬಾರಿಗೆ ಕೂಲಿ ಚಳುವಳಿಯ ಮೂಲಕ (Labour Movement) ಉತ್ತರ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಆರಂಭಿಸಲಾಯಿತು. ಮಹಿಳಾ ದಿನೋತ್ಸವದ ಮುಖೇನ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ಸ್ಮರಿಸಿ, ಮೇಲುಕು ಹಾಕುವ ದಿನವಿದು. 1975 ರ ಮಾರ್ಚ್ 8 ರ ‘ಅಂತರರಾಷ್ಟ್ರೀಯ ಮಹಿಳಾ ದಿನ’ದಿಂದ ಸಂಯುಕ್ತ ರಾಷ್ಟ್ರಗಳು ಸಹ ಮಹಿಳಾ ದಿನವನ್ನ ಆಚರಿಸಲು ಮುಂದಾದವು.

18 ಮತ್ತು 19 ನೇ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರ್ಕಾರಿ ವಲಯದಲ್ಲಿಯೂ ‘ಜೆಂಡರ್ ಪೇ ಗ್ಯಾಪ್’ ಬಗ್ಗೆ ಧ್ವನಿ ಎತ್ತಲಾಗಿದೆ. ಸಮಾನತೆಗಾಗಿ ಹಲವು ಮಹಿಳಾವಾದಿಗಳು 1970-80 ರ ದಶಕದಲ್ಲೂ ಹೆಚ್ಚು ಹೋರಾಟ ಮುಂದಾದರು. ಹೀಗೇ ದಶಕಗಳಿಂದ ದಶಕಕ್ಕೆ ಮಹಿಳಾ ದಿನ ಆಚರಣೆ ಈಗ ಜಾಗತಿಕವಾಗಿ ಆಚರಣೆಗೆ ಬಂದಿದೆ. ಇದು ಮಹಿಳಾ ದಿನ ಆಚರಣೆಯ ಇತಿಹಾಸವಾಗಿದೆ.ಸಮಾನತೆಗಾಗಿ ಹಲವು ಮಹಿಳಾ ವಾದಿಗಳು 1970-80ರ ದಶಕದಲ್ಲಿ ಹೆಚ್ಚಿನ ಹೋರಾಟವನ್ನು ಪ್ರಾರಂಭಿಸುತ್ತಾರೆ. ಮಹಿಳೆಯರು ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬೆಳೆಯಲು ಪ್ರತಿಯೊಬ್ಬರೂ ಅವಕಾಶವನ್ನು ಕಲ್ಪಿಸಬೇಕು ಮತ್ತು ಪ್ರತಿಯೊಬ್ಬರೂ ಕೂಡ ಪ್ರೋತ್ಸಾಹಿಸಬೇಕು ಎನ್ನುವ ಧೇಯವನ್ನಿಟ್ಟುಕೊಂಡು ಹೋರಾಟವನ್ನು ಪ್ರಾರಂಭಿಸಿದ್ದರ ಫಲವಾಗಿ ಡೆನ್ಮಾರ್ಕ್, ಸ್ವಿಡ್ಕರ್‌ಲ್ಯಾಂಡ್ ನಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನದ ಸಂಭ್ರಮವಲ್ಲ; ಮಹಿಳೆಯರ ಹಕ್ಕುಗಳಿಗಾಗಿ ನಡೆದ ದಶಕಗಳ ಸುದೀರ್ಘ ಹೋರಾಟದ ನೆನಪು ಮತ್ತು ಭವಿಷ್ಯದ ಸಮಾನತೆಯ ಕನಸಿನ ಸಂಕೇತವಾಗಿದೆ.
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂಬ ಮನುವಾಣಿಯನ್ನು ಅನುಸರಿಸಿ ಅನಾದಿ ಕಾಲದಿಂದಲೂ ಮಹಿಳೆಗೆ ಅತ್ಯುಚ್ಚ ಗೌರವವನ್ನು ಸಲ್ಲಿಸುತ್ತಾ ಬಂದ ಸಂಸ್ಕೃತಿ ನಮ್ಮದು.ತಾಯಿಯಾಗಿ ತಂಗಿಯಾಗಿ ಗೆಳತಿಯಾಗಿ ಪತ್ನಿಯಾಗಿ ಹೆಣ್ಣು ಬಗೆಬಗೆಯ ಕರ್ತವ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾಳೆ.ಸಮಾಜದ ಕಟ್ಟುವಿಕೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾಳೆ.ಕಾಲಕ್ರಮೇಣ ಸಾಕ್ಷರತೆ ಆರ್ಥಿಕ ಸ್ವಾತಂತ್ರ್ಯ ಮಹಿಳಾ ವಿಮೋಚನೆಯ ಗಾಳಿ ಬೀಸದಂತೆ ಹೆಣ್ಣು ನಾಲ್ಕು ಗೋಡೆಗಳ ನಡುವಿನಿಂದ ಹೊರಗೆ ಬಂದು ಪುರುಷ ಮೇಲುಗೈ ಸಾಧಿಸಿದ ಕ್ಷೇತ್ರಗಳಲ್ಲೂ ದಾಪುಗಾಲಿಕ್ಕಿ ಸೈ ಎನಿಸಿಕೊಂಡಿದ್ದಾಳೆ.ತೊಟ್ಟಿಲು ತೂಗುವ ಕೈ ರಾಜ್ಯವನ್ನಾಳಬಲ್ಲದು ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ.ಸಾಲುಮರದ ತಿಮ್ಮಕ್ಕ: ಪರಿಸರ ಸಂರಕ್ಷಣೆಯಲ್ಲಿ ಜಾಗತಿಕ ಮಟ್ಟದ ಸಾಧನೆ.
ಸುಧಾ ಮೂರ್ತಿ: ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಅಪಾರ ಕೊಡುಗೆ.
ಕಲ್ಪನಾ ಚಾವ್ಲಾ: ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮೂಲದ ಮೊದಲ ಮಹಿಳೆ.
ಮಿಥಾಲಿ ರಾಜ್: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಬರೆದವರು.
ಮಾಯಾ ಎಂಜೆಲೋ ಹೇಳುತ್ತಾರೆ ಪ್ರತಿ ಬಾರಿ ಮಹಿಳೆಯೊಬ್ಬಳು ತನಗಾಗಿ ಧ್ವನಿ ಎತ್ತಿದಾಗ, ಅವಳು ಇಡೀ ಮಹಿಳಾ ಕುಲದ ಪರವಾಗಿ ನಿಂತಿರುತ್ತಾಳೆ.ಹೆಣ್ಣನ್ನು ಭೋಗದ ವಸ್ತುವಿಗೆ ಸೀಮಿತವಾಗಿ ಅಸಹ್ಯವಾಗಿ ತೋರಿಸುವುದನ್ನ ನಿಲ್ಲಿಸಬೇಕು. ಹೆಣ್ಣು ಎಂದು ಅಬಲೆಯಲ್ಲ ಅವಳು ಪುರುಷರ ಅಷ್ಟೇ ಸಮಾನಳು .ಮಹಿಳೆಯು ಸಮಾಜದ ಒಂದು ಅಂಗ ಮಾತ್ರವಲ್ಲ, ಅವಳು ಸಮಾಜದ ಜೀವನಾಡಿ. ಅವಳಿಗೆ ಸಿಗುವ ಸಮಾನ ಅವಕಾಶಗಳು ಇಡೀ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿವೆ. “ಗಿವ್ ಟು ಗೈನ್” (Give to Gain) ಎಂಬ ಮಂತ್ರದೊಂದಿಗೆ ಪರಸ್ಪರ ಸಹಕಾರ ನೀಡುವ ಮೂಲಕ ಸಮಾನತೆಯ ಜಗತ್ತನ್ನು ನಿರ್ಮಿಸೋಣ.
ರೇಷ್ಮಾ ಶೆಟ್ಟಿ
