ಕಾರ್ಕಳ ಕಾಂಗ್ರೆಸ್ ಕ್ರೀಡಾಕೂಟ ರಾಜ್ಯಕ್ಕೆ ಮಾದರಿ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಕಾರ್ಕಳ: ಬ್ಲಾಕ್ ಕಾಂಗ್ರೇಸ್ ಸಮಿತಿ ಕಾರ್ಕಳ – ಹೆಬ್ರಿ ಹಾಗೂ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾರ್ಕಳ ಸ್ವರಾಜ್ ಮೈದಾನದಲ್ಲಿ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಅಥ್ಲೆಟಿಕ್ಸ್ ಹಾಗೂ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಉಸ್ತುವಾರಿ‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಕಳದಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುವ ಕ್ರೀಡಾಕೂಟವು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು ತನ್ನ ಕ್ಷೇತ್ರದಲ್ಲೂ ಆಯೋಜಿಸುವುದಾಗಿ ಹೇಳಿದರು. ಯುವ ಕ್ರೀಡಾಳುಗಳ ಪ್ರತಿಭೆಯನ್ನು ಮುನ್ನೆಲೆಗೆ ತರುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ರಾಜ್ಯವ್ಯಾಪ್ತಿ ಹಮ್ಮಿಕೊಳ್ಳಬೇಕು. ಆ ಮೂಲಕ ತೆರೆಮರೆಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ಕಾರ್ಕಳ ಕಾಂಗ್ರೆಸ್ ಸಮಿತಿಯ ನಾಯಕರ ಕೆಲಸ ಶ್ಲಾಘನೀಯ ಎಂದರು.

https://www.fathermuller.edu.in/

ಕಾಂಗ್ರೆಸ್ ನಾಯಕರಾದ ಉದಯ್ ಕುಮಾರ್ ಮುನಿಯಾಲು ಮಾತನಾಡಿ, ಕಾರ್ಕಳದಲ್ಲಿ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತಿದ್ದಾರೆ. ಅವರಿಗೆ ಅನುಕೂಲ ವಾತಾವರಣ ನಿರ್ಮಿಸಲು ಹೆಬ್ರಿ ತಾಲೂಕಿನಲ್ಲಿ ಉತ್ತಮ ಕ್ರೀಡಾ ಸಂಕೀರ್ಣ ನಿರ್ಮಿಸಬೇಕು ಹಾಗೂ ಕ್ರೀಡಾಪಟುಗಳಿಗೆ ಉಪಯೋಗವಾಗುವ ದೃಷ್ಟಿಯಿಂದ ಕಾರ್ಕಳದಲ್ಲಿ ಆಯುಷ್ ಕ್ರೀಡಾ ಆರೋಗ್ಯ ಕೇಂದ್ರ ಸ್ಥಾಪಿಸಲು ಮನವಿ ಮಾಡಿದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶುಭದ್ ರಾವ್ ಮಾತನಾಡಿ, ಯುವ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಕಾಂಗ್ರೆಸ್ ಕ್ರೀಡಾಕೂಟ‌ ಆಯೋಜಿಸಲಾಗಿದೆ. ಆ ಮೂಲಕ ಮತ್ತಷ್ಟು ಕ್ರೀಡಾಳುಗಳು ದೇಶಕ್ಕಾಗಿ ಆಡುವಂತಾಗಲಿ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಸವೀನ್, ತಿಂಗಳಾಯ,ಶಗುನ್ ಎಸ್. ವರ್ಮಾ ಹೆಗಡೆ, ವಿದೂಷಿ ದೀಕ್ಷಾ.ವಿ, ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ನಾರಾಯಣಗುರು ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಹಿರಿಯ ವಕೀಲರು ಕಾಂಗ್ರೆಸ್ ನಾಯಕರಾದ ಶೇಖರ ಮಡಿವಾಳ, ಉಡುಪಿ ಕಾಂಗ್ರೆಸ್ ನಾಯಕರಾದ ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳಕೆಬೈಲು, ರಮೇಶ್ ಕಾಂಚಾನ್, ಹರೀಶ್ ಕಿಣಿ, ಸುಧಾಕರ ಕೋಟ್ಯಾನ್, ಕಿರಣ್ ಹೆಗ್ಡೆ, ಸೂರಜ್ ಶೆಟ್ಟಿ ನಕ್ರೆ, ಸುಭಿತ್ ಎನ್.ಆರ್, ಅಜಿತ್ ಹೆಗ್ಡೆ ಮಾಳ, ಶಂಕರ ಶೇರಿಗಾರ, ಸುಧಾಕರ ಶೆಟ್ಟಿ ಮುಡಾರು, ರವಿಶಂಕರ ಶೇರಿಗಾರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *