ವರದಿ ರಾಯಿ ರಾಜ ಕುಮಾರ
ಮಿಜಾರು-ತೋಡಾರು ವಿಷ್ಣುಮೂರ್ತಿ ಯಕ್ಷಾಭಿಮಾನಿ ಬಳಗ ಮತ್ತು ಬೆಳುವಾಯಿ ಯಕ್ಷದೇವ ಮಿತ್ರ ಕಲಾ ಮಂಡಳಿ ಸಂಯೋಜನೆಯಲ್ಲಿ ಮಿಜಾರು ರಮೇಶ ಶೆಟ್ಟಿ ಮರಿಯಡ್ಕ ಕಥಾ ರಚನೆಯ ಕಟೀಲು ಮುರಳೀಧರ ಭಟ್ ಪದ್ಯ ರಚನೆಯ ಮಿಜಾರು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನ ಪ್ರಸಂಗ ಫೆಬ್ರವರಿ ಮೂರರಂದು ಮಿಜಾರು ಕೊಡಮನಿತಾಯ ಬ್ರಹ್ಮ ಬೈದರ್ಕಳ ಗರಡಿಯ ವಠಾರದಲ್ಲಿ ನಡೆಯಲಿದೆ. ಅದೇ ದಿನ ಮಧ್ಯಾಹ್ನ ಪುಸ್ತಕ ಬಿಡುಗಡೆಯ ತರುವಾಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಿಜಾರು ರಮೇಶ ಶೆಟ್ಟಿ ತಿಳಿಸಿದರು.

ನೈಜಕಥಾನಕವನ್ನು ಹಾಗೂ ಸಾಕಷ್ಟು ಪ್ರಾಸಂಗಿಕ ಉದಾಹರಣೆಗಳನ್ನು ಹೊಂದಿರುವ ಈ ಯಕ್ಷಗಾನ ಪ್ರಸಂಗ ಪೌರಾಣಿಕವಾಗಿದ್ದರೂ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವುದಾಗಿದೆ ಎಂದೂ ಅವರು ತಿಳಿಸಿದರು. ದೇವಾನಂದ ಭಟ್ ಸ್ವಾಗತಿಸಿದರು. ಮಂದಾರ ಶೆಟ್ಟಿ ವಂದಿಸಿದರು.
