ವರದಿ ರಾಯಿ ರಾಜ ಕುಮಾರ
ಶಿರ್ತಾಡಿ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ಮಹಿಳಾ ಘಟಕ ಇದರ ಆಶ್ರಯದಲ್ಲಿ ನವೀಕೃತ ಕಟ್ಟಡದ ಉದ್ಘಾಟನೆ ಫೆಬ್ರವರಿ 1 ರಂದು ನಡೆಯಲಿದೆ. ನಾರಾಯಣ ಗುರುಗಳ 171ನೇ ಜಯಂತಿಯ ಪ್ರಯುಕ್ತ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಲಕ್ಷ ತುಳಸಿ ಅರ್ಚನೆ ಮತ್ತು ಗುರು ಪೂಜೆಯು ನಡೆಯಲಿದೆ ಎಂದು ಸೇವಾ ಸಂಘದ ಪ್ರಕಟಣೆ ತಿಳಿಸಿದೆ.

ಜನವರಿ 31 ರಂದು ಸೂರ್ಯಾಸ್ತದಿಂದ ಪ್ರಾರಂಭವಾಗುವ ವಿವಿಧ ದೇವತಾ ವಾಸ್ತು ಪೂಜಾ ಕಾರ್ಯಕ್ರಮಗಳ ತರುವಾಯ ಮರುದಿನ ಲಕ್ಷ ತುಳಸಿ ಅರ್ಚನೆ, ಗುರು ಪೂಜೆ, ನೃತ್ಯ ವೈಭವ, ಸನ್ಮಾನ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಸೋಮನಾಥ ಶಾಂತಿ ಹಾಗೂ ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್ ತಿಳಿಸಿದ್ದಾರೆ.
