ವರದಿ ರಾಯಿ ರಾಜ ಕುಮಾರ
ಸುಳ್ಯ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ ಗುತ್ತಿಗಾರು ಗ್ರಾಮ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವಳಲಂಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 26 ರಂದು 77ನೇ ಗಣರಾಜ್ಯೋತ್ಸವ ಆಚರಣೆ ಯಂದು ಧ್ವಜಾರೋಹಣವನ್ನು ನಿವೃತ್ತ ಸೈನಿಕ ಶ್ರೀ ಸೋಮಶೇಖರವರು ನೆರವೇರಿಸಿದರು, ಇದೇ ವೇಳೆ ಮೆಟ್ರಿಕ್ ಮೇಳವನ್ನು ಗುತ್ತಿಗಾರ್ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತ್ತಾಜೆ ಉದ್ಘಾಟನೆಗೊಳಿಸಿದರು,
ಅಚ್ಚುಕಟ್ಟಾಗಿ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು, ಫಲಾನುಭವಿಗಳು ಮಕ್ಕಳು ತಂದಂತಹ ವಸ್ತುವನ್ನು ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.





ಈ ಕಾರ್ಯಕ್ರಮದಲ್ಲಿ ಗುತ್ತಿಗಾರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬಾತ್ತಾಜೆ, ಶಾಲಾ ಮುಖ್ಯ ಶಿಕ್ಷಕಿ ಕುಮಾರಿ ತೃಪ್ತಿಕೆ.ಪಿ., ಅತಿಥಿ ಶಿಕ್ಷಕಿಯರಾದ ನಳಿನಾಕ್ಷಿ ಪಿ.ಎಸ್., ಅಪೂರ್ವ ಕೆ. ಟಿ., ಗೌರವ ಶಿಕ್ಷಕಿ ತೇಜಾವತಿ ಡಿ., ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಎಚ್., ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮಂಗಳೂರು ಇಲ್ಲಿನ ಕಾರ್ಯದರ್ಶಿ ಶ್ರೀಮತಿ ಡಿ.ಆರ್.ಸುನಂದ ದಂಬೆಕೋಡಿ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
