ನಮ್ಮ ಮಲೆನಾಡಿನ ಪ್ರದೇಶದಲ್ಲಿ ಬಹುತೇಕ ಎಲ್ಲೆಡೆ ಕೈತೋಟ ತರಕಾರಿ ಇರುವುದೇ ಆಗಿದೆ ಬಿಡಿ. ಆದರೆ ಇದರ ಕುರಿತು ಮನೆ ಹಿತ್ತಲು ಈಗ ಕಣ್ಮರೆಯಾಗಿದೆ ತರಕಾರಿಗೆ ಪೇಟೆ ಪಟ್ಟಣವೇ ನಮ್ಮಲ್ಲೇ ಮಾಡಿದರು ಈಗ ಕಾಡು ಪ್ರಾಣಿಗಳ ಉಪಟಳ ದಿಂದ ರಕ್ಷಿಸುವುದೇ ಕಷ್ಟ ಹಾಗಿದ್ದಲ್ಲು ಈ ಸಲ ಗೆಣಸು ಕೃಷಿಯಲ್ಲಿ ಚಿಕ್ಕ ಚಿಕ್ಕ ಗಡ್ಡೆಗಳಾಗುವುದು ಸಾಮಾನ್ಯ ಅದರಲ್ಲೂ ಒಂದುವರೆ ಕೆಜಿ ಗಾತ್ರದ್ದು ಬಾಟಲಿನಂತೆ ಗದೆಯಂತೆ ಇದ್ದು ಒಂದು ಕೆಜಿಯ ತೆಂಗಿನಕಾಯಿಯ ಗಾತ್ರದಲ್ಲೂ ಬೆಳಿಗ್ಗೆ ಗೆಣಸು ಮೂಡಿಬಂದಿದ್ದು ಸೋಜಿಗವೇ. ಈ ಹಿಂದೆ ಬಾತುಕೋಳಿ ರೂಪದಲ್ಲೂ ಮೂಡಿಬಂದಿತ್ತು ಯುಗಯುಗಾದಿ ಬಂದಿದೆ ಹೊಸ ಬೆಳಕಾಗಿ ನಾವು ಚೇತನದ ನವ ಪ್ರಭೆಯಾಗಿ ಬೇವು ಬೆಲ್ಲದ ಸಿಹಿ ಕಹಿ ರಸದಲ್ಲಿ ಬಾಳಿನ ಅರ್ಥ ಅರಿವಾಗಲಿ ಎಂಬಂತೆ ಪ್ರಕೃತಿಯ ಚಿಗುರು ಹೂವು, ಕಾಯಿ ಹಣ್ಣುಗಳಲ್ಲಿ ಮನೆ ಮನದಲ್ಲಿ ಸಂತೋಷ ತುಂಬಿಸುವ ಕೆಲಸವಾಗಿದೆ. ಪರಾಭವ ಸಂವತ್ಸರ ಸ್ವಾಗತಿಸೋಣ.



ಅಂದೇ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ನಿರ್ದೇಶಕ ಬರಹಗಾರ ಕುಮಾರ್ ಪೆರ್ನಾಜೆಯವರಲ್ಲಿ ವೈವಿಧ್ಯ ಕಂಡುಬಂದಿದ್ದು ಯಾರು ಏನೇ ಹೇಳಿದರು ಎಷ್ಟೇ ತಂತ್ರಜ್ಞಾನ ಮುಂದುವರಿದರು ಈ ವಿಸ್ಮಯಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಪ್ರಕೃತಿಗೆ ಪ್ರಕೃತಿಯೇ ಸಾಟಿ ಹೊಸ ಹೊಸ ತಾಳಿಗಳು ಸೃಷ್ಟಿಯಾಗಬಹುದು ಪ್ರಕೃತಿ ಮುಂದೆ ಯಾರು ದೊಡ್ಡವರಲ್ಲ ಬಯಕೆ ಕಡಿಮೆಯಾದಷ್ಟು ಬದುಕು ಸರಳವಾಗುತ್ತದೆ ಸರಳವಾದಷ್ಟು ಮನಸ್ಸು ಶುದ್ದವಾಗುತ್ತದೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕ್ಕೆ ಹೊಸ ಹರುಷ ಹೊಸತು ಹೊಸತು ತರುತಿದೆ ಸಾಹಿತಿ ಕವಿ ವರೇಣ್ಯ ದ.ರಾ ಬೇಂದ್ರೆ ಅವರ ಕವನ ಒಂದರ ಸಾಲುಗಳು ಎಷ್ಟೊಂದು ವಾಸ್ತವ ಅಲ್ಲವೇ ..?
ಯಶಸ್ಸು ಸುಮ್ಮನೆ ಬರುವುದಿಲ್ಲ ಎಲ್ಲಿ ಅವಮಾನ ಇದೆಯೋ ಅಲ್ಲೇ ಸನ್ಮಾನವೂ ಸಿಗುತ್ತೆ. ಪ್ರಕೃತಿಯ ಸೊಬಗು ಇನ್ನು ಹೆಚ್ಚುತ್ತದೆ ಒಮ್ಮೆ ಸಿಕ್ಕಿದರೆ ಸವಿಯಿರಿ ಸಾಧನೆ ಅಂದರೆ ಇದು ಮನಸ್ಸಿಗೆ ಇಷ್ಟವಾದ ಕೃಷಿಯಲ್ಲಿ ಒಳ್ಳೆಯ ಬೆಳೆ ಬಂದಾಗ ಬರೋ ಖುಷಿನೇ ಬೇರೆ. ಪ್ರತಿಯೊಂದು ಸಂಬಂಧದ ಮೂಲವೂ ಸ್ವಾರ್ಥವೇ ಸಮಯ ಬಂದಾಗ ಅದರ ಉದ್ದೇಶ ತಿಳಿಯುತ್ತದೆ ಅಷ್ಟೇ. ಹಿರಿಯರ ಅಂಬೋಣ ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.
ಚಿತ್ರ ಬರಹ: ಕುಮಾರ್ ಪೆರ್ನಾಜೆ
