ಫೆಬ್ರವರಿ 16ರಂದು ಅಬ್ಬಕ್ಕ @500 ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ 100ರ ಸಂಭ್ರಮ

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ವಿಭಾಗ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು ಇದರ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿದ ಸಹಯೋಗದೊಂದಿಗೆ ಫೆಬ್ರವರಿ 16 ನೇ ಸೋಮವಾರದಂದು ಪುತ್ತೂರು ನೆಹರುನಗರದ ವಿವೇಕಾನಂದ ಕಾಲೇಜಿನಲ್ಲಿ ಅಬ್ಬಕ್ಕ@ 500 ರಾಷ್ಟ್ರೀಯ ವಿಚಾರ ಸಂಕೀರ್ಣ ಶತಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕುಲದೀಪ್ ಎಂ ಚೌಟ ಹಾಗೆಯೇ ಗುಂಟ ಲಕ್ಷ್ಮಣ್, ಮುರಳಿಕೃಷ್ಣ ಕೆ ಎನ್, ಗುರುನಾಥ್ ಬಡಿಗೇರ ಪಾಲ್ಗೊಳ್ಳಲಿದ್ದಾರೆ.

ನಂತರದಲ್ಲಿ ರವೀಂದ್ರ ಪಿ ಇವರ ಅಧ್ಯಕ್ಷತೆಯಲ್ಲಿ ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ ಗೋಷ್ಠಿಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೆಯೇ ಡಾ. ಯಶೋದಾ ರಾಮಚಂದ್ರ ಅಧ್ಯಕ್ಷತೆಯಲ್ಲಿ ಭಾರತದ ಇತಿಹಾಸ – ರಾಣಿ ಅಬ್ಬಕ್ಕಳ ಕೊಡುಗೆ ಗೋಷ್ಟಿಯಲ್ಲಿ ಡಾ. ತುಕಾರಾಮ್ ಪೂಜಾರಿ ಉಪನ್ಯಾಸ ನೀಡಲಿದ್ದಾರೆ. ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್‌ ಇವರಿಂದ ವೀರ ರಾಣಿ ಅಬ್ಬಕ್ಕ ಕಥಾ ಕೀರ್ತನೆಯೂ ನಡೆಯಲಿದೆ.

ಸಮಾರೋಪ ಸಮಾರಂಭವು ಡಾ. ಕೆ ಎಂ ಕೃಷ್ಣ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗುಂಟ ಲಕ್ಷ್ಮಣ ಸಮರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕೋಟ ಶ್ರೀನಿವಾಸ ಪೂಜಾರಿ, ಅಮರ್ ಕೋಟೆ, ಶ್ರೀಪತಿ ಕಲ್ಲೂರಾಯ, ಮುರಳಿಕೃಷ್ಣ ಕೆ ಎನ್, ಪ್ರೊ. ಶಿವಪೂಜಿ ಕೋಟಿ, ಪ್ರೊ. ರೋಹಿಣಿ ಕುಮಾರ್ ಹಿಲ್ಲಿ, ಡಾ ಸಿ ವಿ ಮರಿದೇವರಮಠ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ 21 ಮಹಿಳಾ ಸಾಧಕರಿಗೆ ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರ ಪ್ರದಾನ ನಡೆಯಲಿದೆ. ಸುರೇಖಾ ಶೆಟ್ಟಿ (ಮಹಿಳಾ ಸಬಲೀಕರಣ), ಸುಂದರಿ ನಲಿಕೆ ಪೆರುವಾಯಿ (ದೈವಾರಾಧನೆ), ಡಾ. ಆಶಾಜ್ಯೋತಿ ರೈ (ಸಮಾಜಸೇವೆ – ಸಂಘಟನೆ), ವನಜಾ ಪೂಜಾರ್ತಿ ಬೀಡಿನಗುಡ್ಡೆ (ರುದ್ರಭೂಮಿ ಸೇವೆ), ಡಾ ಗ್ರೀಷ್ಮಾ ವಿವೇಕ್ ಆಳ್ವ (ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ಥ್ಯ), ಗೀತಾ ಲಕ್ಷ್ಮೀಶ್ (ಬಾಲ ಸಂಸ್ಕಾರ – ಸಂಘಟನೆ), ವಿದುಷಿ ಸುಮಂಗಲ ರತ್ನಾಕರ್ ರಾವ್ (ಭಾರತೀಯ ಕಲೆಗಳು), ಕೆ ಬಿ ಅಮ್ಮಣ್ಣಿ (ನಾಟಿವೈದ್ಯೆ), ಪೂರ್ಣಿಮಾ ಯತೀಶ್ ರೈ (ಯಕ್ಷಗಾನ), ಮಹಾಲಕ್ಷ್ಮೀ ದಾರಂದಕುಕ್ಕು (ಉದ್ಯಮಶೀಲತೆ), ಸಿ ಎಸ್ ರಾಧಿಕಾ (ಆಂಬುಲೆನ್ಸ್ ಚಾಲನೆ), ಯಶೋಧಾ ಕೇಶವ್ ಉಡುಪಿ (ತುಳು ಸಾಹಿತ್ಯ ಸಂಘಟನೆ), ಸಂಧ್ಯಾ ಮೂಡಬಿದ್ರೆ (ಪರಿಸರ), ಶುಭಾಶಯ ಜೈನ್ (ಯಕ್ಷಗಾನ ಪ್ರಸಂಗ ಸಾಹಿತ್ಯ), ಕು. ಶ್ರಾವ್ಯ ಯು (ಉದಯೋನ್ಮುಖ ಕಲಾವಿದೆ), ಭವ್ಯರಾಣಿ ಪಿ ಸಿ (ಸಮುದಾಯ ಅಭಿವೃದ್ಧಿ), ರೂಪಲೇಖಾ (ಆಯುರ್ವೇದ), ಶಾಲಿನಿ ಆತ್ಮಭೂಷಣ್ ಪುತ್ತೂರು (ಭರತನಾಟ್ಯ), ಶುಭಾ ಅಡಿಗ ಪುತ್ತೂರು (ತಾಳಮದ್ದಳೆ), ಕು. ಶಹನಾ ಮುಮ್ತಾಜ್ ನೆಲ್ಯಡ್ಕ (ಪತ್ರಿಕೋದ್ಯಮ), ಕೆ ಎನ್ ದೀಪಿಕಾ (ಯೋಗ ಮತ್ತು ಧ್ಯಾನ) ಇವರುಗಳು ಗೌರವ ಸನ್ಮಾನವನ್ನು ಪಡೆಯಲಿದ್ದಾರೆ.

Leave a Reply

Your email address will not be published. Required fields are marked *