ಭಾರತ್ ಬೀಡಿ ವರ್ಕ್ಸ್ ಸಂಸ್ಥೆಯ ಸಂಸ್ಥಾಪಕರ 113 ನೇ ಜನ್ಮ ದಿನಾಚರಣೆ

ಮಂಗಳೂರು: ಪ್ರಖ್ಯಾತ 30 ಮಾರ್ಕಿನ ಬೀಡಿಗಳ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ನ  ಸಂಸ್ಥಾಪಕರಾದ ಮಂಜುನಾಥ ಪೈ ಅವರ 113ನೇ  ಜನ್ಮ ದಿನಾಚರಣೆಯನ್ನು ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಸಲಾಯಿತು. 

ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಬ್ರಾಯ ಎಂ. ಪೈ ಅವರು ಸಂಸ್ಥೆಯು ನಡೆದು ಬಂದ ದಾರಿ, ಸಂಸ್ಥಾಪಕರು ಸಮಾಜಕ್ಕೆ ನೀಡಿದ ಕೊಡುಗೆ, ಸಂಸ್ಥಾಪಕರ ದೂರ ದೃಷ್ಟಿಯ ಬಗ್ಗೆ ವಿವರಿಸಿದರು. 

ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ತಮ್ಮ ಅನಿಸಿಕೆಯನ್ನು ಹೇಳಿದರು. ರಮೇಶ್ ಪೈ ನಿಪ್ಪಾಣಿ ಅವರು ಸಂಸ್ಥಾಪಕರ ಬಗ್ಗೆ ಗುಣಗಾನ ಮಾಡಿದರು. 

ಲೆಕ್ಕ ಪರಿಶೋಧಕ ಸಿ. ಎ. ಶಿವಾನಂದ ಪೈ ಅವರು ಸಂಸ್ಥೆ ನಡೆದು ಬಂದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ನಾಗೇಂದ್ರ ಡಿ ಪೈ, ಆನಂದ ಜಿ. ಪೈ, ವೆಂಕಟೇಶ ಎಂ. ಪೈ ಹಾಗೂ ರಫ್ತು ಮಾರುಕಟ್ಟೆ ವಿಭಾಗದ ಆಡಳಿತ ಅಧಿಕಾರಿ

ಅಭಿಷೇಕ್ ಎನ್. ಪೈ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಸುಧೀರ್ ಎಂ.ಪೈ ಅವರು ವಂದಿಸಿದರು.

Leave a Reply

Your email address will not be published. Required fields are marked *