ಕಾಟಿಪಳ್ಳ: ಮಕ್ಕಳು ತಮ್ಮ ಹೆಸರನ್ನು ಉಳಿಸುವ ಆಸೆಯನ್ನು ಹೊಂದಿರಬೇಕು – ರೇಮಂಡ್ ಡಿಕೂನಾ ತಾಕೊಡೆ ಕಿವಿಮಾತು

ಕಾಟಿಪಳ್ಳ: ನಾವು ಎಲ್ಲಾ ಕಡೆಯಲ್ಲಿ ರಸ್ತೆ ಮತ್ತು ಭವನಗಳನ್ನು ಗತಿಸಿಹೋದವರ ಹೆಸರಿನಿಂದ ನೋಡುತ್ತೇವೆ. ಅದನ್ನು ಓದುವಾಗ ನಮ್ಮ ಹೆಸರೂ ನೆನಪಿಡುವಂತಹ ಕೆಲಸ ಆಗಬೇಕು ಎಂದು ಹಂಬಲದಿಂದ ಒಳ್ಳೆಯ ಕೆಲಸವನ್ನು ಮಾಡಲು ಪ್ರೇರೇಪಣೆ ಪಡೆಯಬೇಕು ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.

ಅವರು ಕಾಟಿಪಳ್ಳ ಇನ್ಫೆಂಟ್ ಮೇರಿ ಚರ್ಚ್ ನಡೆಸುವ ವಿದ್ಯಾರ್ಥಿಗಳ ಮೂರು ದಿನಗಳ ರಜೆ ಶಿಬಿರವನ್ನು ಶಾಲಾ ಸಭಾಂಗಣದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು. ಶಾಲಾ ಪ್ರಾಂಶುಪಾಲರಾದ ಪ್ರಾನ್ಸಿಸ್ ಡಿಕೂನಾ ಮಾತನಾಡಿ ; ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆಯಲು ಪ್ರಯತ್ನ ಪಡಬೇಕು.ಯಾವಾಗಲೂ ತಾನು ಮೊದಲು ಬರಲು ಎದ್ದು ನಿಲ್ಲಬೇಕು ಎಂದು ಕಿವಿಮಾತು ಹೇಳಿ ಶುಭಾಶಯ ಕೋರಿದರು.

ಅಧ್ಯಕ್ಷರಾಗಿ ಫಾ. ಸಂತೋಷ್ ಲೋಬೊ ಮಾತನಾಡಿ; ಶಿಬಿರದ ಉದ್ದೇಶ ಆಟೋಟ ಮಾಡುವುದು ಅಲ್ಲದೆ ಅದರ ಜೊತೆಗೆ ಜೀವನೋತ್ಸವ ಪ್ರೇರೇಪಣೆ ಮಾಡುವುದು ಆಗಿದೆ ಎಂದರು.
ಮೊದಲಿಗೆ ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಫೆರ್ನಾಂಡೀಸ್ ಸ್ವಾಗತಿಸಿ ಶಿಬಿರ ಸಂಯೋಜಕಿ ವಿನ್ನಿ ಡಿಸೋಜ ವಂದಿಸಿದರು. ಬ್ರದರ್‌ ಪ್ರಿನ್ಸ್ಟನ್ ಡಿಸೋಜ ನಿರೂಪಿಸಿದರು. ವೇದಿಕೆಯಲ್ಲಿ ಬ್ರದರ್ ಮರ್ವಿನ್ ಕಾರ್ಯದರ್ಶಿ ರೋಶನ್ ಡಿಸೋಜ ಇದ್ದರು.
ವಿದ್ಯಾರ್ಥಿಗಳಾದ ರೀಶಲ್, ಪ್ರಿನ್ಸ್ಟನ್, ಶಿಕ್ಷಕಿ ಆನ್ಸಿಟಾ ಡಿಸೋಜ ಮತ್ತಿತರ ಶಿಕ್ಷಕರು ಸಹಕರಿಸಿದರು.

Leave a Reply

Your email address will not be published. Required fields are marked *