ಮೂಡುಬಿದಿರೆ: 2025 ಡಿಸೆಂಬರ್ನಲ್ಲಿ ನಡೆದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಆಳ್ವಾಸ್ನ ಬಿ.ಕಾಂ. ವಿದ್ಯಾರ್ಥಿಗಳಾದ ಪವಿತ್ರಾ ಪ್ರಭು (205), ಶರಶ್ಚಂದ್ರ ದೇವಾಜಿ (203) ಅದಿತಿ ಪ್ರಿಯಾ (201), ಯಶಸ್ ಆರ್.(201), ದೀಕ್ಷಾ (201) ಮತ್ತು ಮನ್ವಿತಾ (165) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್-1 ರಲ್ಲಿ ಹಾಗೂ ಸುಚೇತಾ ಎಸ್. (151) ಮತ್ತು ಸಹನಾ ಪ್ರಭು (151) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್-2 ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.

ಹಿರಿಯ ವಿದ್ಯಾರ್ಥಿನಿಯಾದ ಪ್ರೀತಿ ಎಸ್ ಗೋವೆಕರ್ (156) ಸಿ. ಎಸ್. ಪ್ರೊಫೆಶನಲ್ ಗ್ರೂಪ್-2 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಕಂಪೆನಿ ಸೆಕ್ರೆಟರಿ ಆಗಿರುತ್ತಾರೆ.
