ಧರ್ಮಸ್ಥಳ: ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ರಸ್ತೆಯನ್ನು ಸಾರ್ವಜನಿಕರ ಬೇಡಿಕೆಯಂತೆ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ರಸ್ತೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲಾ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು ನಾಮಫಲಕವನ್ನು ಅನಾವರಣ ಮಾಡಿದರು.


ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ವಿಮಲಾ ಪರಮೇಶ್ವರ್, ಉಪಾಧ್ಯಕ್ಷರಾದ ಪಿ ಶ್ರೀನಿವಾಸ್ ರಾವ್, ಸದಸ್ಯರಾದ ಮುರಳಿಧರ ದಾಸ್, ದಿನೇಶ್ ರಾವ್, ರಾಮಚಂದ್ರರಾವ್, ರವಿಕುಮಾರ್, ಸುನಿತಾ ಶ್ರೀಧರ್, ಸುನಿತಾ ಡಿಕೆ, ಸುಧಾಕರ, ಮಾಜಿ ಪಂಚಾಯತ್ ಸದಸ್ಯರಾದ ಲಕ್ಷ್ಮಿ ನಾರಾಯಣ್ ರಾವ್, ಭುಜಬಲಿ, ಅರುಣ್ ಕುಮಾರ್, ಊರಿನ ಪ್ರಮುಖರಾದ ಶ್ರೀ ಸುಬ್ರಮಣ್ಯ ಪ್ರಸಾದ್, ಜಗದೀಶ್ ಜೈನ್, ಅಭಿಷೇಕ್ ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ವಂದನ ಪ್ರಶಾಂತ್ ಬಲ್ಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
