ಲೊರೆಟ್ಟೊ: ಯೇಸು ಕ್ರಿಸ್ತರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭ ಶುಕ್ರವಾರದಂದು ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಚರ್ಚ್ ನಿಂದ ಪಂಚಾಯತ್ ಮಾರ್ಗವಾಗಿ ಶಿಲುಬೆಯ ಗುಡ್ಡದ ವರೆಗೆ ಶಿಲುಬೆ ಹಾದಿಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡರು.






ಚರ್ಚ್ ಧರ್ಮ ಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ, ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಕಿರು ಗುರುಮಠದ ನಿರ್ದೇಶಕರಾಗಿರುವ ವಂ. ಆ್ಯಂಟನಿ ಕ್ಲ್ಯಾನಿ ಡಿಸೋಜ, ಶಿಲುಬೆಯ ಪ್ರಾಮುಖ್ಯತೆಯ ಬಗ್ಗೆ ಪ್ರವಚನ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ವಂ. ಜೆಸನ್ ಮೊನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು. ನೂರಾರು ಭಕ್ತಾದಿಗಳು ಈ ಪ್ರಾರ್ಥನ ಕೂಟದಲ್ಲಿ ಹಾಗೂ ಶಿಲನೆಯ ಹಾದಿಯಲ್ಲಿ ಭಕ್ತಿಯಿಂದ ಭಾಗವಹಿಸಿದರು.
