ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನಲ್ಲಿ ಯುಕೆಜಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭ

ಲೊರೆಟ್ಟೊ ಸೆಂಟ್ರಲ್ ಸ್ಕೂಲ್, ಲೊರೆಟ್ಟೊ ಇಲ್ಲಿ ‌ ಯುಕೆಜಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಶಾಲಾ ವ್ಯವಸ್ಥಾಪಕರಾದ ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತಾ, ಮುಖ್ಯ ಅತಿಥಿಯಾಗಿ ಲವೀನಾ ಡಿಸೋಜ, ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಜೇಸನ್ ವಿಜಯ್ ಮೊನಿಸ್, ಪಿಟಿಎ ಉಪಾಧ್ಯಕ್ಷರಾದ ರೋಡ್ನಿ ಐವನ್ ಡಿಸೋಜ ಹಾಗೂ ಉಪಪ್ರಾಂಶುಪಾಲರಾದ ಅನಿತಾ ಪೈಸ್ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವು ಮಕ್ಕಳ ನೃತ್ಯದಿಂದ ಆರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಲವೀನಾ ಡಿಸೋಜ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದರು. ತಮ್ಮ ಸಂದೇಶದಲ್ಲಿ ಅವರು ಜೀವನದ ಪ್ರತಿಯೊಂದು ಸಣ್ಣ ಯಶಸ್ಸನ್ನೂ ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿದರು. ಮಕ್ಕಳನ್ನು ಕೇವಲ ಪಾಠವಿಷಯ ಮಾತ್ರವಲ್ಲದೆ ಪಠ್ಯೇತರ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿಯೂ ಉತ್ತೇಜಿಸಬೇಕೆಂದು ಪಾಲಕರಿಗೆ ಸಲಹೆ ನೀಡಿದರು.

Leave a Reply

Your email address will not be published. Required fields are marked *