ಮಂಗಳೂರು: ಗ್ಯಾರಂಟಿ ಯೋಜನೆ ಬಡವರ, ಮಧ್ಯಮ ವರ್ಗದವರ ಜೀವನಾಡಿ – ಡಾ. ಪುಷ್ಪಾ ಅಮರನಾಥ್

ಮಂಗಳೂರು:  ಗ್ಯಾರಂಟಿ ಯೋಜನೆ ಬಡವರ, ಮಧ್ಯಮ ವರ್ಗದವರ ಜೀವನಾಡಿ. ಅವರ ಜೀವನಕ್ಕೆ ಒಂದಷ್ಟು ಆಸರೆಯಾಗಿ ರಾಜ್ಯದಲ್ಲಿ ಅನುಷ್ಠಾನವಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಹೇಳಿದರು

ಅವರು ಕಡಬ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಗ್ರಾಮ ಪಂಚಾಯತ್ ಬಿಳಿನೆಲೆ ಸಂಯುಕ್ತ ಆಶ್ರಯದಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ  ನಡೆದ ನೋಂದಣಿಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆ ಮೂಲಕ ಶಿಕ್ಷಣ, ಮನೆಗೆ ಬೆಳಕು, ಮಹಿಳೆಯವರಿಗೆ ಉಚಿತ ಪ್ರಯಾಣ, ಹೊಟ್ಟೆ ತುಂಬಿಸುವ, ನಿರುದ್ಯೊಗಿಗಳಿಗೆ ಒಂದಿಷ್ಟು ಆಸರೆಯಾಗುವ ಕಾರ್ಯ ಆಗಿದೆ. ಗ್ಯಾರಂಟಿ ಯೋಜನೆಯನ್ನು ಪಡೆಯುತ್ತಿರುವವರ ಬಗ್ಗೆ ಗ್ರಾಮ ಮಟ್ಟದಿಂದ ಮಾಹಿತಿ ಪಡೆಯುವ ಸರ್ವೆ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಅರ್ಹರಿಗೆ ಮಾತ್ರವೇ ಸಿಗಬೇಕಾದ ಗ್ಯಾರಂಟಿ ಯೋಜನೆಯನ್ನು ಉಳ್ಳವರು ಪಡೆಯುತ್ತಿದ್ದಾರೆಯೇ ಎಂಬ ಬಗ್ಗೆಯೂ ಸರ್ವೆಯಲ್ಲಿ ಮಾಹಿತಿ ಸಿಗಲಿದೆ ಎಂದರು.

ಸಂವಿಧಾನದಿಂದ ಮಹಿಳೆಯರಿಗೂ ಅಧಿಕಾರ ಸಿಕ್ಕಿದೆ. ವಿಧಾನ ಸಭೆ, ಸಂಸತ್‍ಗೂ ಮಹಿಳೆಯರ ಪ್ರವೇಶ ಆಗಬೇಕಾಗಿದ್ದು, ಕೇಂದ್ರದ ಮಹಿಳಾ ಮೀಸಲಾತಿ ಕೇವಲ ಪತ್ರಕ್ಕೆ ಸೀಮಿತವಾಗಿದ್ದು, ಇದು ಆದಷ್ಟು ಬೇಗ ಅನುಷ್ಠಾನ ಆಗಬೇಕಿದ್ದು, ಮಹಿಳೆಯವರಿಗೂ ಮೀಸಲಾತಿ ಸಿಗುತ್ತದೆ ಎಂಬ ಆಶಯ ಇದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಯಿಂದ ನಮಗೆ ಜನರ ಸೇವೆ ಮಾಡುವ ಸೌಭಾಗ್ಯ ದೊರೆತಿದೆ. ಪ್ರಾಮಾಣಿಕವಾಗಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಇಂದು ಸಶಕ್ತರಾಗಿದ್ದಾರೆ ಎಂದು ಹೇಳಿದರು.

ಪುತ್ತೂರು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸತೀಶ್ ಭಟ್, ಬಿಳಿನೆಲೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಶಾರದಾ ದಿನೇಶ್, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಚೆಲುವ ರಂಗಪ್ಪ, ಅಭಿಲಾಷ್ಪಿ ಕೆ. ಅನುಷ್ಠಾನ ಸಮಿತಿ ಸದಸ್ಯರಾದ ಸತೀಶ್ ಪಿ. ದೀಕ್ಷಿತ್ ಡಿ.ಜಿ, ಉಷಾ ಅಂಚನ್, ಕೆ. ಮಾಧವ ಪೂಜಾರಿ, ಭವಾನಿಶಂಕರ್ ಬಿ., ಜಗದೀಶ್ .ಕೆ, ಸೈಮನ್ ಸಿ.ಜೆ, ಎ.ಕೆ.ಬಶೀರ್, ಮಹಮ್ಮದ್ ಹನೀಫ್, ಹರಿಣಾಕ್ಷಿ, ಟಿ.ರಾಘವೇಂದ್ರ, ಗಂಗಾಧರ ಶೆಟ್ಟಿ, ಅವಿನಾಶ್ ಬಿ.ಎಸ್. ಗೌರಿಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಪಿ.ಡಿ.ಒ ಚಂದ್ರಾವತಿ ವಂದಿಸಿದರು. ಶಿಕ್ಷಕ ಲೋಕನಾಥ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ನೋಂದಾವಣಿಗೆ ಬಾಕಿ ಇರುವ  ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದಲ್ಲಿ  ವಿವಿಧ ಕ್ಷೇತ್ರದ ಸಾಧಕರನ್ನು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಹಾಗೂ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *