ಮಂಗಳೂರು: ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಮಹತ್ವದ ಕಾರ್ಯಾಗಾರ

ಮಂಗಳೂರು: ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮಾದರಿಗಳ ಮೂಲಕ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ 10 ಪಂಚಾಯತ್‍ಗಳಿಗೆ ಕ್ರಮವಾಗಿ ಫೀಲ್ಡ್ ಟೆಸ್ಟಿಂಗ್ ಕಿಟ್ ಮತ್ತು ಹೈಡ್ರೊಜನ್ ಸಲ್ಫೈಡ್ ವಯಲ್ಸ್ (FTK and H2S vials) ಬಳಸುವ ವಿಧಾನ ಮತ್ತು ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಯ ಮಹತ್ವದ ಬಗ್ಗೆ ಪ್ರತಿಗ್ರಾಮ ಪಂಚಾಯತ್‍ನ 20 ಜನರಿಗೆ ತರಬೇತಿ ನೀಡಲಾಯಿತು.

ಈ ಅಭಿಯಾನ ಕಾರ್ಯಕ್ರಮದಲ್ಲಿ ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಟೇಶ್, ಬಂಟ್ವಾಳ ತಾಲೂಕು ಪಂಚಾಯತ್‍ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್, ತಾಲೂಕು ಪಂಚಾಯತ್‍ ಮ್ಯಾನೇಜರ್  ಪ್ರಕಾಶ್  ಉಪಸ್ಥಿತರಿದ್ದರು.
ಜಿಲ್ಲಾ ಪ್ರಯೋಗಾಲಯ ಕಿರಿಯ ವಿಶ್ಲೇಷಣಾಗಾರರಾದ ಸುವಾಸಿನಿ, ಬಂಟ್ವಾಳ ತಾಲೂಕು ನೀರಿನ ಮಾದರಿಗಳ ಸಂಗ್ರಹಗಾರ ಅರುಣ್‍ಕುಮಾರ್‍ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *