ಶಕ್ತಿ ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರಧಾನ ಹಾಗೂ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಗೆ ಬೀಳ್ಕೊಡುಗೆ ಸಮಾರಂಭ 2025-26 ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.ಮಕ್ಕಳಿಗೆ ಸಂಸ್ಥಾಪಕರಾದ ಕೆ ಸಿ ನಾೈಕ್, ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ 10ನೇ ತರಗತಿ ಮಕ್ಕಳಿಗೆ ಜ್ಯೋತಿ ಪ್ರಧಾನ ಮಾಡಿದರು.
ನಂತರ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾಗಿರುವ ರಮೇಶ್ ಕೆ ಇದು ಬೀಳ್ಕೊಡುಗೆ ಸಮಾರಂಭ ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ನಮ್ಮ ಶಕ್ತಿ ಪಿಯು ಕಾಲೇಜ್‍ಗೆ ನಿಮ್ಮನ್ನೆಲ್ಲ ಸ್ವಾಗತಿಸುವ ಕಾರ್ಯಕ್ರಮವಾಗಿದೆ ಎಂದು ನಾನು ಭಾವಿಸುತ್ತೇನೆ. ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ನೀವೆಲ್ಲ ಏರಬೇಕು ಆ ಮೂಲಕ ನೀವು ಕಲಿತ ಈ ಶಕ್ತಿ ಶಾಲೆಗೆ, ಸಮಾಜಕ್ಕೆ ನೀವೆಲ್ಲ ಕೊಡುಗೆ ನೀಡುವಂತಾಗಬೇಕು. ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕಲಿಸಿಕೊಟ್ಟ ಎಲ್ಲಾ ಸಂಸ್ಕಾರಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜದಲ್ಲಿ ನೀವು ಕಲಿತ ಶಾಲೆಗೆ ಶಿಕ್ಷಕರಿಗೆ ಮತ್ತು ನಿಮ್ಮ ತಂದೆ ತಾಯಿಯರಿಗೆ ಗೌರವ ತರುವಂತೆ ಬದುಕಿ. ನೀವು ತಪ್ಪು ಮಾಡಿದಾಗ ಗುರುಗಳು ನೀವು ಉತ್ತಮ ವಿದ್ಯಾರ್ಥಿಯಾಗಿ ರೂಪುಗೊಳ್ಳಲು ನಿಮಗೆ ಗದರಿರುತ್ತಾರೆ, ದಂಡಿಸಿರುತ್ತಾರೆ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಜೀವನದಲ್ಲಿ ಸಾಧನೆ ಮಾಡಿ ಮುಂಬರುವ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿ ಎಂದು ಶುಭ ಹಾರೈಸಿದರು.

ನಂತರ ಮಾತನಾಡಿದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್‍ಮೂರ್ತಿ ಹೆಚ್ ವಿದ್ಯಾರ್ಥಿಗಳಿಗೆ ಸಿಂಹದ ಹಸಿವು, ಹದ್ದಿನ ತೀಕ್ಷಣತೆ ಇರಬೇಕು. ನೀವು ಓದುವ ವಿಚಾರದಲ್ಲಿ, ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಎಷ್ಟು ಪರಿಶ್ರಮವನ್ನು ಹಾಕುತ್ತಿರೋ ಅಷ್ಟೇ ಪ್ರತಿಫಲ ನಿಮಗೆ ಸಿಗುತ್ತೆ. ಸತತ ಪ್ರಯತ್ನ ಇದ್ದರೆ ಯಶಸ್ಸು ನಿಮ್ಮದಾಗುತ್ತೆ. ನಮ್ಮ ಜೀವನದಲ್ಲಿ ನಮ್ಮಿಂದ ಆಗುವ ತಪ್ಪುಗಳನ್ನು ಮೊದಲು ನಾವು ಸರಿಪಡಿಸಿಕೊಳ್ಬೇಕು. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಆಗು ಹೋಗುಗಗಳನ್ನು ನೀವು ಕಲಿಯಬೇಕು. ಶಕ್ತಿ ಪಿಯು ಕಾಲೇಜ್ ನಿಮ್ಮನ್ನೆಲ್ಲ ಸ್ವಾಗತಿಸುತ್ತದೆ. ನಿಮ್ಮ 10ನೇ ತರಗತಿಯ ಪರೀಕ್ಷೆಗೆ ಶುಭವಾಗಲಿ ಉತ್ತಮ ಅಂಕಗಳನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ ಸಿ ನಾೈಕ್ ಅವರು ಮಾತನಾಡಿ ಮಕ್ಕಳ ಸವಾರ್ಂಗೀಣ ಪ್ರಗತಿಗೆ ಬೇಕಾದ ಸಕಲ ಸೌಲಭ್ಯವನ್ನು ಆಡಳಿತ ಮಂಡಳಿ ನೀಡುತ್ತಿದೆ. ಈ ಶಕ್ತಿ ವಿದ್ಯಾ ಸಂಸ್ಥೆಯನ್ನು ಕಟ್ಟಿದ ಮುಖ್ಯ ಉದ್ದೇಶ ಇಲ್ಲಿ ವ್ಯಾಸಂಗ ಮಾಡುವ ಮಕ್ಕಳು ದೇಶದ ಸಂಪತ್ತಾಗಬೇಕು. ನಿಮ್ಮ ಭವಿಷ್ಯದ ಜೀವನ ಸಂತೋಷಧಾಯಕವಾಗಿರಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಶಿಕ್ಷಕರಾದ ಶರಣಪ್ಪ ಮತ್ತು ಸ್ಮಿಶ ಮುಂಬರುವ ಬೋರ್ಡ್ ಪರೀಕ್ಷೆಗೆ ಶುಭ ಹಾರೈಸುವ ಮೂಲಕ ಮಕ್ಕಳಿಗೆ ಹಿತನುಡಿಗಳನ್ನಾಡಿದರು.
ವಿದ್ಯಾರ್ಥಿಗಳಾದ ನಯನ್ ಮತ್ತು ಮಾಹಿ ತಮ್ಮ ಶಾಲಾ ದಿನಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. 9ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಮನರಂಜನ ಕಾರ್ಯಕ್ರಮಮತ್ತು ಸ್ವರ್ಧೆಗಳನ್ನು ಏರ್ಪಡಿಸಿದರು.

ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ ಸಿ ನಾೈಕ್ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್, ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಕ್ಷಕ್ರಿ ಶ್ವೇತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *