ಲೊರೆಟ್ಟೊ ಚರ್ಚ್ ವ್ಯಾಪ್ತಿಯ ಮಹಿಳಾ ಆಯೋಗದ ಹಾಗೂ ಕಥೋಲಿಕ್ ಸಭಾ ಸಹಯೋಗದಲ್ಲಿ ಇಂದು ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು. ಬಲಿಪೂಜೆಯ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚರ್ಚ್ ಧರ್ಮ ಗುರುಗಳಾದ ವಂ| ಫ್ರಾನ್ಸಿಸ್ ಕ್ರಾಸ್ತಾರವರು, ಕುಟುಂಬದಲ್ಲೂ ಮತ್ತು ಸಮಾಜದಲ್ಲೂ ನೀವು ನೀಡುತ್ತಿರುವ ಸೇವೆ ಮತ್ತು ಪ್ರೀತಿಗಾಗಿ ನಿಮಗೆ ಗೌರವ ಸಲ್ಲಿಸುತ್ತಾ ದೇವರ ಆಶೀರ್ವಾದಗಳು ನಿಮ್ಮ ಮೇಲೆ ಇರಲಿ, ಸ್ತ್ರೀ ಸೃಷ್ಟಿಯ ಮೂಲ, ಶಕ್ತಿ ಮತ್ತು ವಾತ್ಸಲ್ಯದ ಸಂಕೇತ. ಅನಾದಿ ಕಾಲದಿಂದಲೂ ಕೌಟುಂಬಿಕ ನಿರ್ವಹಣೆ, ಸಂಸ್ಕೃತಿ ಮತ್ತು ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.





ಇಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದು ತಿಳಿಸಿದರು. ಮಂಗಳೂರಿನ ಪ್ರತಿಷ್ಠಿತ ಮನೋಶಾಸ್ತ್ರಜ್ಞರಾದ ಡಾ. ಕ್ಯಾರೋಲಿನ್ ಡಿ’ಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ‘ಆಧುನಿಕ ಯುಗದಲ್ಲಿಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ’ ಈ ವಿಷಯದ ಕುರಿತು ಮಾತನಾಡಿ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಚರ್ಚ್ ಧರ್ಮ ಗುರುಗಳು ಹಾಗೂ ವೇದಿಕೆಯಲ್ಲಿ ನೆರೆದಿರುವ ಎಲ್ಲಾ ಅತಿಥಿಗಳು ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಮುಖ್ಯೋಪಾಧ್ಯಯರಾದ ವಂ|ಜೇಸನ್ ಮೊನಿಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಐಸಾಕ್ ವಾಸ್, ಕಾರ್ಯದರ್ಶಿಯಾದ ಆಲ್ವಿನ್ ಪಿಂಟೊ, ಸಂಯೋಜಕರಾದ ಸಚಿನ್ ನೊರೊನ್ಹಾ, ಕಥೋಲಿಕ್ ಸಭಾ ಸ್ತ್ರಿ ಸಂಯೋಜಕರಾದ ಫಿಲೋಮಿನಾ ರೊಡ್ರಿಗಸ್ ಉಪಸ್ಥಿತರಿದ್ದರು.
ಸ್ತ್ರೀ ಆಯೋಗದ ಸಂಚಾಲಕಿಯಾದ ಲವಿಟ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಜೆಸಿಂತ ಮಿನೇಜಸ್ ಸ್ವಾಗತಿಸಿದರು, ಒಲಿವಿಯ ಪಿಂಟೊ ವಂದಿಸಿದರು.
