ಮಂಗಳೂರು: ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದ ಆವರಣದಲ್ಲಿ ಎರಡು ದಿನಗಳ ಅಂತರ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಮಾರ್ಚ್ 20 ರಂದು ಸಂಭ್ರಮದಿಂದ ಉದ್ಘಾಟನೆಗೊಂಡಿತು.










ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸೋನಾಲಿ ಫೆರ್ನಾಂಡಿಸ್ ಅವರು ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕ್ರೀಡೆಯು ಕೇವಲ ದೈಹಿಕ ಶಕ್ತಿಯನ್ನ ಅಲ್ಲದೆ, ಜೀವನದ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ,” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಅವರು, ಕ್ರೀಡಾಪಟುಗಳು ಶಿಸ್ತು ಮತ್ತು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಪವರ್ ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷರಾದ ಸತೀಶ್ ಕುಮಾರ್ ಕುದ್ರೋಳಿ, ನಿವೃತ್ತ ಪ್ರಾಧ್ಯಾಪಕಿ ಡಾ. ಪ್ಲಾಸಿ ರಾಯಪ್ಪನ್ ಜಯಂತ್ ಕೊಂಡಾಣ,ಶ್ರೀ ಸಂಪತ್ ಬಿ ಕೆ ಉಪಸ್ಥಿತರಿದ್ದರು.
ರೋಶನಿ ನಿಲಯ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ಮೀನಾ ಮೊಂತೇರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಶನಿ ನಿಲಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಸಂದೀಪ್ ಉಳ್ಳಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಇಶಿಕಾ (ದ್ವಿತೀಯ ಬಿ ಎ ) ಸ್ವಾಗತ ಕೋರಿದರು, MSc. CFS ವಿದ್ಯಾರ್ಥಿನಿ ಶಿರ್ಲಿನ್ ಮಾಬೆನ್ ವಂದನಾರ್ಪಣೆ ಮಾಡಿದರು. 2nd MSc. CFS ಮಿಸ್ ಅಪರ್ಣಾ ರಾವ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ನಾಯಕ ಮಿಸ್ ಇಣಿಕಾ ಶೆಟ್ಟಿ ಮತ್ತು ಮಿಸ್.ಆನ್ ಕಾರ್ಯಕ್ರಮ ನಿರೂಪಿಸಿದರು.
ಈ ಚಾಂಪಿಯನ್ ಶಿಪ್ ವಿವಿಧ ಜಿಲ್ಲೆಗಳ ಒಟ್ಟು 36 ಕಾಲೇಜುಗಳ 148 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಜೆಸಿಂತಾ ಡಿಸೋಜ , ನಿವೃತ್ತ ಪ್ರಾಧ್ಯಾಪಕಿ ಡಾ. ಪ್ಲಾಸಿ ರಾಯಪ್ಪನ್, ಪರೀಕ್ಷಾಂಗ ಕುಲಸಚಿವರಾದ ಡಾ.ಸಿಸಿಲಿಯ ಫರೀದಾ ಗೋವಿಯಸ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹ ನಿರ್ದೇಶಕರಾದ ಡಾ. ಹರಿದಾಸ್ ಕೂಳೂರ್, ಕ್ರಿಮಿನಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲಕರಾದ ಅಸಿಸ್ಟೆಂಟ್ ಪ್ರೊಫೆಸರ್ ಸಾರಿಕಾ ಅಂಕಿತ್, ಕನ್ನಡ ವಿಭಾಗದ ಮುಖ್ಯಸ್ಥರಾದ ಅಸಿಸ್ಟೆಂಟ್ ಪ್ರೊಫೆಸರ್ ಓಬನಾಥ್ ಉಪಸ್ಥಿತರಿದ್ದರು.
ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇದರ ವಿದ್ಯಾರ್ಥಿ ಮಿಸ್ಟರ್ ಸಿದ್ದಾರ್ಥ್ ಸುವರ್ಣ ಇವರು ಡೆಡ್ಲಿಫ್ಟ್ ದಾಖಲೆ ಸೇರಿ ಒಟ್ಟು 826 ಕೆ.ಜಿ ಭಾರ ಎತ್ತುವ ಮೂಲಕ ‘ಅತ್ಯುತ್ತಮ ಲಿಫ್ಟರ್ ಪ್ರಶಸ್ತಿ ಪಡೆದುಕೊಂಡರು.
ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಹರ್ಷಿತಾ ವಿ. ಸಾಲಿಯಾನ್ ಅವರು ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್ಲಿಫ್ಟ್ ಸೇರಿ ಒಟ್ಟು 385 ಕೆ.ಜಿ ಭಾರ ಎತ್ತುವ ಮೂಲಕ ‘ಅತ್ಯುತ್ತಮ ಲಿಫ್ಟರ್’ ಆಗಿ ಹೊರಹೊಮ್ಮಿ ಎಲ್ಲರ ಗಮನ ಸೆಳೆದಿದ್ದಾರೆ.
ಪುರುಷರ 120 ಕೆಜಿ ವಿಭಾಗದಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇದರ ಮಿಸ್ಟರ್ ಪ್ರಸಾದ್ ಡಿಸೋಜಾ ಇವರು ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್ಲಿಫ್ಟ್ ಸೇರಿ ಒಟ್ಟು 860 ಕೆ.ಜಿ ಭಾರ ಎತ್ತುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾಖಲೆಯನ್ನು ಬರೆದರು. ಅದೇ ರೀತಿ ಸೈಂಟ್ ಮೇಲೆ ಕಲ್ಯಾಣಪುರ ಇದರ ಮಿಸ್ಟರ್ ವಂಶಿ ಇವರು 120 ವಿಭಾಗದಲ್ಲಿ ದಾಖಲೆಯನ್ನು ಬರೆದರು.
ಪುರುಷ ವಿಭಾಗ
ಪುರುಷ ವಿಭಾಗದ ಚಾಂಪಿಯನ್ ಆಗಿ ಆಳ್ವಾಸ್ ಕಾಲೇಜ್ ಮೂಡಬಿದ್ರೆ
ದ್ವಿತೀಯ ಸ್ಥಾನವನ್ನು ಸೈಂಟ್ ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ
ತೃತೀಯ ಸ್ಥಾನವನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು
ಚತುರ್ಥ ಸ್ಥಾನವನ್ನು SDM ಉಜಿರೆ ಮಂಗಳೂರು
ಮಹಿಳಾ ವಿಭಾಗ
ಮಹಿಳಾ ವಿಭಾಗದ ಚಾಂಪಿಯನ್ ಆಗಿ ಆಳ್ವಾಸ್ ಕಾಲೇಜ್ ಮೂಡಬಿದ್ರೆ
ದ್ವಿತೀಯ ಸ್ಥಾನವನ್ನು SDM ಕಾಲೇಜ್ ಉಜಿರೆ
ತೃತೀಯ ಸ್ಥಾನವನ್ನು ಡಾ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಉಡುಪಿ
ಚತುರ್ಥ ಸ್ಥಾನವನ್ನು SDMCBM ಮಂಗಳೂರು
