ಕೊಲ್ಲೂರು ಹುಳಿಪಾಡಿ ಬಳಕುಂಜ ಗ್ರಾಮಗಳಲ್ಲಿ ಕೆಐಡಿಬಿ ನಿರ್ಮಾಣಕ್ಕಾಗಿ ಜಾಗ ಸ್ವಾದೀನ ಪಡಿಸುಕೊಳ್ಳುವಿಕೆಗೆ ಅಧಿಕಾರಿಗಳೊಂದಿಗೆ ಸಭೆ – ಶಾಸಕ ಐವನ್‌ ಡಿʼಸೋಜಾ

ಮಂಗಳೂರು ತಾಲೂಕಿನ ಬಳಕುಂಜ ಕೊಲ್ಲೂರು ಹುಳಿಪಾಡಿ ಗ್ರಾಮಗಳಲ್ಲಿ ಕೃಷಿ ಭೂಮಿ ಮತ್ತು ಕೈಗಾರಿಕಾ ಪ್ರದೇಶಕ್ಕೆ ಯೋಗ್ಯವಲ್ಲದ ಭೂಮಿಗಳನ್ನು ವಶಪಡಿಸಿಕೊಳ್ಳುತ್ತಿರುವ ಬಗ್ಗೆ ಇಂದು ಕೆಐಡಿಬಿ ಅಧಿಕಾರಿ ಮೇಘನಾ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಅವರ ಸಮಸ್ಯೆಗಳ ಬಗ್ಗೆ ತಿಳಿಸಲಾಯಿತು. ಮತ್ತು ಈ ಸಭೆಯಲ್ಲಿ ಈ ಗ್ರಾಮಗಳ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ಬಗ್ಗೆ ಅದರ ಹಿಂದಿರುವ ವಿಚಾರಗಳನ್ನು  ಬಗ್ಗೆ ಸಭೆಯಲ್ಲಿ ಚರ್ಚಿಸಿ, ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಈ ಹಿಂದೆ ಬೇರೆ ಗ್ರಾಮಗಳನ್ನು ವಶಪಡಿಸಿಕೊಳ್ಳಬೇಕೆಂದು ಶಾಸಕರ ಶಿಫಾರಸ್ಸಿನ ಮೇರೆಗೆ ಈ ಗ್ರಾಮದ ಹಿಂದೆಯೇ  ಈ ಪ್ರದೇಶಗಳಲ್ಲಿ ಈಗ ಇರುವ ಪ್ರದೇಶಗಳನ್ನು ಹಿಂದಿನ ಶಾಸಕರ ಶಿಫಾರಸ್ಸಿನ ಮೇರೆಗೆ  ಇಲ್ಲಿ ಕೈಗಾರಿಕಾ ಪ್ರದೇಶ ಮಾಡಲಾಗುತ್ತಿದೆ ಹೊರತು ಆ ಪ್ರದೇಶದಲ್ಲಿ ಇರುವ ಜಾಗದ ಬಗ್ಗೆ & ಸವಲತ್ತುಗಳು ಕೈಗಾರಿಕಾ ಪ್ರದೇಶವನ್ನಾಗಿ ಮಾಡಲು ಯೋಗ್ಯವಲ್ಲದ ಸ್ಥಳವಾಗಿದೆ ಎಂದು ತೀರ್ಮಾನಿಸಲಾಗಿದ್ದು, ಈ ಭಾಗದಲ್ಲಿ ಯಾವುದೇ ಕೈಗಾರಿಕೆ ಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ ಈ ಪ್ರದೇಶವನ್ನು ಕೈಗಾರಿಕಾ ಪ್ರದೇಶದಿಂದ ಕೈಬಿಡಬೇಕೆಂದು ಆಭಾಗದ ಸ್ಥಳೀಯ ನಿವಾಸಿಗಳು ಶಾಸಕ ಐವನ್‌ ಡಿʼಸೋಜಾರವರ ಮುಖಾಂತರ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು

 ಈ ಪ್ರದೇಶದಲ್ಲಿ ಕೆಲವು ಭೂಮಾಫಿಯಾ ಕೆಲಸಮಾಡುತ್ತಿದ್ದು  ಅನೇಕರು ಹಲವಾರು ಗುಡ್ಡೆ ಪ್ರದೇಶವನ್ನು ತೆಗೆದುಕೊಂಡು ಸರಕಾರದಿಂದ ಒಳ್ಳೆಯ ದರವನ್ನು ನಿಗದಿಪಡಿಸಿ ನೀಡುತ್ತೇವೆ ಎಂದು ಭರವಸೆ ನೀಡುವ ಮೂಲಕ ಅನೇಕ ಭೂಮಾಫಿಯದವರು ಕೆಲಸ ಮಾಡುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಯಿತು. ಮತ್ತು ಇಲಾಖೆಯವತಿಯಿಂದ ಸ್ಥಳೀಯನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿ ಮೇಘನಾ ಇವರು ಇದುವರೆಗೆ ನೋಟಿಸು ಮಾತ್ರ ನೀಡಲಾಗಿದ್ದು ವಸಪಡಿಸಿಕೊಳ್ಳುವ ಅಂತಿಮ ತೀರ್ಮಾನ ವಾಗಲಿಲ್ಲ ಅಲ್ಲದೇ ಯಾವುದೇ ದರವನ್ನು ನಿಗದಿ ಮಾಡಲಿಲ್ಲ ಅಂತಿಮ ನೋಟಿಸು ನೀಡಿದ ಮೇಲೆಯೇ ದರವನ್ನು ನಿಗದಿಪಡಿಸುವುದು ಎಂದು ಸಭೆಯಲ್ಲಿ ಸ್ವಷ್ಟಪಡಿಸಿದರು. ಯಾವುದೇ ಅನುಮಾನಗಳಿದ್ದರೆ ನನ್ನನ್ನು ಸಂಪರ್ಕಿಸಬಹುದು ಸ್ವಷ್ಟನೆ ನೀಡುವುದಾಗಿಯೂ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಐವನ್‌ ಡಿʼಸೋಜಾ ಇವರು ಕೈಗಾರಿಕಾ ಪ್ರದೇಶಕ್ಕೆ ಯೋಗ್ಯವಲ್ಲದ ಭೂಮಿಯನ್ನು ನೀಡಿದರೆ ಅದರ ಬೆಳವಣಿಗೆ ಕುಂಠಿತಗೊಳ್ಳುವುದುಎಂದು ತಿಳಿಸಿದರು ಸ್ಥಳೀಯರ ಭಾವನೆಗಳಿಗೆ ಹಾಗೂ ಸ್ಥಳೀಯರ ಬೇಡಿಕೆಗಳನ್ನು ಸ್ಪಂದಿಸದೇ ಇದ್ದರೆ ಬಲತ್ಕಾರವಾಗಿ ಭೂಮಿಯನ್ನು ವಶಪಡಿಸಿಕೊಂಡರೆ ಇದು ಕಾನೂನಿಗೆ ವಿರುದ್ದವಾದುದು ಇಂತಹ ಬೆಳವಣಿಗೆ ಕಂಡು ಬಂದರೆ ನಾನು ಹೋರಾಟಮಾಡುವುದಾಗಿ ಐವನ್‌ ಡಿʼಸೋಜಾರವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಭಟ್, ಅನಿತಾ ಡಿಸೋಜಾ, ಜಾನ್ಸನ್ ಡಿಸೋಜಾ, ದೇವದಾಸ್ ಮಲ್ಯ, ಇಸ್ಮೈಲ್, ಮೊಹಮ್ಮದ್, ಸುದೀರ್, ಬೋಜ, ಜೆನೆಟ್, ಹರಿಣಾಕ್ಷಿ, ಸುಲೈಮಾನ್, ರಾಜೇಶ್ ಡಿಸೋಜಾ, ಮಾರಿಯಾ ಪಿಂಟೋ, ಜಾನ್ ಪಿಂಟೋ, ವಿನ್ಸೆಂಟ್ ಸೆಕ್ವೇರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *