ಅತ್ಯುತ್ತಮ ಸಾಧನೆಯಲ್ಲಿ ಮೂಡುಬಿದಿರೆ ನ್ಯೂ ವೈಬ್ರೆಂಟ್

ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ ನಡಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು 25-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ. ಈ ಉತ್ತಮ ಸಾಧನೆಯೊಂದಿಗೆ ರಾಜ್ಯದ ಪ್ರಮುಖ ಪಿಯು ಕಾಲೇಜುಗಳಲ್ಲಿ ವೈಬ್ರೆಂಟ್ ಒಂದಾಗಿ ಗುರುತಿಸಿಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ರಾಂಕ್ ಪಡೆದಿರುವ ವಿದ್ಯಾರ್ಥಿ ಧನುಷ್ ಗುತ್ತಿ , “ನನಗೆ ವಿಜ್ಞಾನ ವಿಭಾಗದಲ್ಲಿ 598 ಅಂಕಗಳನ್ನು ಗಳಿಸಲು ನನ್ನ ಕಾಲೇಜಿನ ಕೊಡುಗೆ ಮಹತ್ತರವಾದುದು. ಕಾಲೇಜಿನಲ್ಲಿ ನಡೆಯುವ ಗೈಡೆಡ್ ಸ್ಟಡಿ ನನಗೆ ಉತ್ತಮ ಅಂಕಗಳಿಸಲು ಸಹಾಯವಾಯಿತು.” ಎಂಬ ಸಂತಸದ ಮಾತುಗಳನ್ನು ವ್ಯಕ್ತ ಪಡಿಸಿದರು.

ವಿಜ್ಞಾನ ವಿಭಾಗದ ರಾಂಕ್ ವಿಜೇತೆ ಸರಸ್ವತಿ ಎಂ.ಎಸ್ ” 593 ಅಂಕ ಬಂದಿರುವುದು ಬಹಳ ಖುಷಿ ಆಯಿತು. ಹಲವು ದಿನಗಳಿಂದ ಉಪನ್ಯಾಸಕರ ಮಾರ್ಗದರ್ಶನ ಮತ್ತು ನಮ್ಮ ಕಾಲೇಜಿನ ನಿರ್ದೇಶಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಎಂಬ ಹರುಷವನ್ನು ವ್ಯಕ್ತ ಪಡಿಸಿದರು. ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಂಕ್ ಪಡೆದಿರುವ ತಸ್ನೀಮ್ ಎಸ್. ಎಂ ” 592 ಅಂಕ ಬಂದಿರುವುದರಿಂದ ಬಹಳ ಸಂತೋಷ ಆಗ್ತಾ ಇದೆ. ನನ್ನ ಕಾಲೇಜಿನ ವಾತಾವರಣ, ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. “ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಲೇಜಿನ ನಿರ್ದೇಶಕರು ಮತ್ತು ಬೋಧಕ ಮತ್ತು ಬೋಧಕೇತರ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ವ್ಯಕ್ತ ಪಡಿಸಿದರು.

Leave a Reply

Your email address will not be published. Required fields are marked *