ಬಂಟ್ವಾಳ: ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರ ಪಾಮ್ ಸಂಡೆ ವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.










ಈದರೊಂದಿಗೆ ಪವಿತ್ರ ವಾರಕ್ಕೆ ಅತ್ಯಂತ ಭಕ್ತಿ ಪೂರ್ವಕವಾಗಿ ಆರಂಭ ನೀಡಲಾಯಿತು. ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಮೈದಾನದಲ್ಲಿ ಆರಂಭಗೊಂಡ ಪ್ರಾರ್ಥನಾ ವಿದಿ ಹಾಗೂ ಮೆರವಣಿಗೆಯಲ್ಲಿ ಗರಿಗಳೊಂದಿಗೆ ನೂರಾರು ಭಕ್ತಾದಿಗಳು, ಮಕ್ಕಳು ಭಕ್ತಿಯಿಂದ ಪಾಲ್ಗೊಂಡರು . ಪ್ರಧಾನ ಧರ್ಮಗುರುಗಳಾಗಿಚ ಚರ್ಚ್ ಧರ್ಮಗುರುಗಳಾದ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ಹಾಗೂ ನೂರಾರು ಭಕ್ತಾದಿಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಅರ್ಪಿಸಿದರು. ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಲ್ ರವರಾದ ವಂ ಜೇಸನ್ ಮೊನಿಸ್ ರವರು ದೇವರ ವಾಕ್ಯದ ಮೇರೆಗೆ ಪ್ರವಚನ ನೀಡಿದರು . ತಪಸ್ಸುಕಾಲದಲ್ಲಿ ಅತ್ಮ ನವೀಕರಣಗೊಳಿಸಲು 3 ದಿನಗಳ ದ್ಯಾನಕೂಟವನ್ನು ಆಯೋಜಿಸಲಾಗಿತ್ತು ಸಮಾರಂಭದ ಮೇಲುಸ್ತುವಾರಿಯನ್ನು ಚರ್ಚ್ ಪಾಲನ ಮಂಡಳಿ ವಹಿಸಿತ್ತು.
