ಕವಿತೆಗಳು ಕವಿಯ ಅನುಭವದ ಒಂದು ಭಾಗದೊಂದಿಗೆ ಶೃಂಗಾರಗೊಂಡು ಹೊಮ್ಮುತ್ತವೆ: ರೇಮಂಡ್ ಡಿಕೂನಾ ತಾಕೊಡೆ

ಸೋಮೇಶ್ವರ: ಜಾನಪದದ ಜೋಗುಳ, ಸ್ವಾತಂತ್ರ್ಯ ಹೋರಾಟದ ಪ್ರೇರಣೆ, ಹಾಗೂ ಇನ್ನಿತರ ಸಾಮಾಜಿಕ ಭದ್ದತೆಯ ವಿವಿಧ  ವಿಷಯಗಳ ಜೊತೆಗಿನ ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.

ಅವರು ಶ್ರೀ ಸೋಮೇಶ್ವರ ದೇವಸ್ಥಾನ ಸೋಮೇಶ್ವರ ಇಲ್ಲಿ ಮಹಾ ಶಿವರಾತ್ರಿ ಪ್ರಯುಕ್ತದ ಆಯ್ದ ಹಿರಿಯ ಕವಿಗಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಹಾ ಶಿವರಾತ್ರಿ ಪ್ರಯುಕ್ತ ದೇವಳಕ್ಕೆ ನೂರಾರು ಭಕ್ತರ ಭೇಟಿಯ ಸಮಯದಲ್ಲಿ ಈ‌ ಕವಿಗೋಷ್ಟಿ ನಡೆಯಿತು.

ಮೊದಲಿಗೆ ಅರ್ಚಕರಾದ ಶ್ರೀ ಶ್ರೀಶ ಅವರು ದೀಪ ಬೆಳಗಿಸಿದರು. ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರು,ನಾಯ್ಗರು ಸಮಾಜದ ಮುಖಂಡರಾದ ಹರಿಶ್ಚಂದ್ರ ಗಟ್ಟಿ ವೇದಿಕೆಯಲ್ಲಿ ಇದ್ದರು.

ಮೊದಲಿಗೆ ಕವಿಗೋಷ್ಟಿ ಸಂಯೋಜಕ ಆದ  ಎಂ ಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು.

ಕವಿಗೋಷ್ಟಿಯ ಚಾಲನಾ ಕವಿತೆ ಗಝಲ್ ಓದಿ ಡಾ ಸುರೇಶ್ ನೆಗಳಗುಳಿ ಮಾಡಿದರು.

ಕವಿಗಳಾದ  ವಿಜಯಲಕ್ಷ್ಮಿ ಕಟೀಲ್,ಅನಾರ್ಕಲಿ  ಸಲಿಂ,ಸುಮಂಗಲ ದಿನೇಶ್, ಗಣೇಶ್ ಪ್ರಸಾದ್ ಜಿ,ಹರಿ ಪ್ರಸಾದ್ ಶೆಟ್ಟಿ ಗಾರ್, ವೆಂಕಟೇಶ ಗಟ್ಟಿ, ರಶ್ಮಿ ಸನಿಲ್, ರೇಮಂಡ್ ಡಿಕೂನಾ ತಾಕೊಡೆ ಕವಿಗಳು ಸಾಧರ ಪಡಿಸಿದರು.

ಮೊದಲಿಗೆ ಸಂಯೋಜಕ ಎಂಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು, ರಶ್ಮಿ ಸನಿಲ್ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *