ಮಂಗಳೂರು: ಕಳೆದ ನಾಲ್ಕು ದಶಕಗಳಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಸಾಂಸ್ಕೃತಿಕ ಸಂಘ ಇವರು “ಪೂಲ್ ಕುಂಕುಮ್” ಕಾರ್ಯಕ್ರಮವನ್ನುವನ್ನು ಆಚರಿಸಿದರು. ಕೆನರಾ ಶಾಲೆಯ ಸುಧೀಂದ್ರ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉಷಾ ನಂದಗೋಪಾಲ ಶೆಣೈ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ನಿರ್ದೇಶಕ ರಂಗಕರ್ಮಿ ಕಾಸರಗೋಡು ಚಿನ್ನ, ಸಿ ಎ ಪಿ ನರೇಂದ್ರ ಪೈ ಶ್ರದ್ಧಾ ಸುಬ್ರಾಯ ಪೈ ಡೈರೆಕ್ಟರ್ ಆಫ್ ತ್ರಯಿ ಜ್ಯುವೆಲರ್ ಉಪಸ್ಥಿತರಿದ್ದರು.
ಕಾಸರಗೋಡು ಚಿನ್ನ ಮಾತನಾಡಿ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಮತ್ತು ನಮ್ಮೆಲ್ಲರನ್ನು ಒಟ್ಟುಗೂಡಿಸುವ ಪೂಲ್ ಕುಂಕುಮ್ ನಂತಹ ಕಾರ್ಯಕ್ರಮಗಳು ಯಾವಾಗಲೂ ಮೂಡಿಬರಬೇಕು ಎಂದರು. ಶ್ರದ್ಧಾ ಸುಬ್ರಾಯ ಪೈ ನಮ್ಮ ಸಂಸ್ಕೃತಿ ಮತ್ತು ಪೂಲ್ ಕುಂಕುಮದ ಮಹತ್ವವನ್ನು ತಿಳಿಸಿದರು.ನಮ್ಮ ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ಮೂಡಿ ಬರುವುದರಿಂದ ಇದರ ವೈಜ್ಞಾನಿಕ ಮಹತ್ವವನ್ನು ಅರಿತು ನಮ್ಮ ಮುಂದಿನ ಪೀಳಿಗೆ ಖಂಡಿತವಾಗಿಯು ನಮ್ಮ ಸಂಸ್ಕೃತಿಯನ್ನು ಮುಂದುವರಿಸಿ ಕೊಂಡು ಹೋಗುವ ವಿಶ್ವಾಸವನ್ನು ಸಿ ಎ ಪಿ ನರೇಂದ್ರ ಪೈ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗಾಯತ್ರಿ ಮಂಜುನಾಥ್ ಕಾಮತ್ ಮತ್ತು ಜಿ ಎಸ್ ಬಿ ಮಹಿಳಾ ವೃಂದದ ಅಧ್ಯಕ್ಷೆ ವಿಜಯಲಕ್ಷ್ಮೀ ಪಿ ಕಾಮತ್ ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷೆ ಪ್ರಭಾ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರವನ್ನು ವಿದ್ಯಾ ಬಾಳಿಗ ನಿರೂಪಿಸಿದರು. ರಂಜಿತ ಮತ್ತು ಪ್ರತಿಮಾ ನಾಯಕ್ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಗೀತಾ ಸಿ ಕಿಣಿ, ಜನಾರ್ಧನ ಸಾವನಾಲ್, ಕೊಡಿಯಾಲ್ ಖಬರ್ ಪತ್ರಿಕೆಯ ಸಂಪಾದಕರಾದ ವೆಂಕಟೇಶ ಬಾಳಿಗ ಮಾವಿನಕುರ್ವೆ, ವೀಣಾ ಕಾಮತ್, ರತ್ನಾಕರ ಕುಡ್ವ, ಉಪಸ್ತಿತರಿದ್ದರು. ಸಂಘದ ಕಾರ್ಯದರ್ಶಿ ವಿಜಯಲಕ್ಷ್ಮೀ ಪಡಿಯಾರ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಪ್ರಭಾ ಭಟ್ ರಚಿಸಿ ಮುರಳೀಧರ ಕಾಮತ್ ಗುರುಲೀಲಾ ನಿರ್ದೇಶಿಸಿ, ಮುರಳೀಧರ ಕಾಮತ್ ಕೊಂಚಾಡಿ ಸಂಗೀತ ನಿರ್ದೇಶನದ. ಚಂದ್ರಿಕಾ ಮಲ್ಯ ನಿರೂಪಣೆಯಲ್ಲಿ ಕೊಂಕಣಿ ಹಾಸ್ಯಮಯ ನಾಟಕ ಸವಾಯಿ ಬುದ್ದವಂತಾಲೊ ಸಂಘಚೋ ರೂಪ್ಯಾಲೋ ಮಹೋತ್ಸವ್ ಪ್ರದರ್ಶನಗೊಂಡಿತು. ಸಂಘದ ಸದಸ್ಯರು ಸಹಕರಿಸಿದರು.
